ರಜನಿಕಾಂತ್  ಅಭಿನಯದ ‘ಕಾಲಾ’ ಚಿತ್ರ ಬಿಡುಗಡೆಯಾಗುವ ಕಾಲ ಬಂತು

21 Apr 2018 3:25 PM | Entertainment
471 Report

ಈ ವರ್ಷದ ಬಹುನಿರೀಕ್ಷಿತ ಚಿತ್ರವಾದ, ರಜಿನಿಕಾಂತ್ ಅಭಿನಯದ 'ಕಾಲಾ' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಯಾಗಿಗೂ ಹೇಳಿರಲಿಲ್ಲ.. ಈ ಮೊದಲು ಚಿತ್ರವು ಏಪ್ರಿಲ್ 27ರಂದು ಬಿಡುಗಡೆಯಾಗುತ್ತದೆ ಎನ್ನಲಾಗುತ್ತಿತ್ತು. ತಮಿಳು ಚಿತ್ರರಂಗದ ಮುಷ್ಕರದಿಂದಾಗಿ ಚಿತ್ರವು ಜೂನ್ 7ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ಸೆನ್ಸಾರ್ ಬೋರ್ಡ್ ನಿಂದ ಚಿತ್ರಕ್ಕೆಈಗಾಗಲೇ  ಪ್ರಮಾಣ ಪತ್ರ ಲಭಿಸಿದೆ. ಈ ಬಗ್ಗೆ ನಟ, ನಿರ್ಮಾಪಕ, ನಿರ್ದೇಶಕ, ರಜಿನಿಕಾಂತ್ ರ ಅಳಿಯ ಧನುಷ್ ಕೂಡ ಟ್ವೀಟ್ ಮಾಡಿದ್ದು, "ವಿಶ್ವಾದ್ಯಂತ ಎಲ್ಲಾ ಭಾಷೆಗಳಲ್ಲೂ ಸೂಪರ್ ಸ್ಟಾರ್ ರಜಿನಿಕಾಂತ್ ರ 'ಕಾಲಾ' ಜೂನ್ 7ರಂದು ಬಿಡುಗಡೆಯಾಗಲಿದೆ" ಎಂದಿದ್ದಾರೆ. ರಜಿನಿಕಾಂತ್ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಪ್ರಸಿದ್ಧ ನಟ ನಾನಾ ಪಾಟೇಕರ್, ಹುಮಾ ಖುರೇಷಿ, ಸಮುದ್ರಕಣಿ, ರವಿ ಕಾಳೆ, ಧನುಷ್ ನಟಿಸಿದ್ದಾರೆ. ಪಾ ರಂಜಿತ್ ನಿರ್ದೇಶನದ ಈ ಚಿತ್ರದ ಟೀಸರ್ ಮಾರ್ಚ್ ನಲ್ಲಿ ಬಿಡುಗಡೆಯಾಗಿದ್ದು, ದಾಖಲೆಯನ್ನು ಸೃಷ್ಟಿಸಿತ್ತು ಎನ್ನಬಹುದು. ಕಾಲಾ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

 

Edited By

Manjula M

Reported By

Manjula M

Comments