ಹೊರರಾಷ್ಟ್ರಗಳಲ್ಲೂ ಶುರುವಾಗಿದೆ ಟಗರಿನ ಪೊಗರು

21 Apr 2018 12:02 PM | Entertainment
512 Report

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ಇತ್ತೀಚಿಗಷ್ಟೆ ಐವತ್ತು ದಿನವನ್ನು ಟಗರು ತುಂಬಾ ಭರ್ಜರಿಯಿಂದ  ಪೂರೈಸಿದೆ.

ಅಮೇರಿಕಾ  ದೇಶದಲ್ಲಿ ಸೂಪರ್ ಹಿಟ್ ಆಗಿರುವ 'ಟಗರು 'ಈಗ ಮತ್ತಷ್ಟು ರಾಷ್ಟ್ರಗಳಲ್ಲಿ ಸ್ಕ್ರೀನಿಂಗ್ ಆಗಲಿದೆಯಂತೆ. ಹೌದು, ದುಬೈ, ಮಸ್ಕತ್ ಹಾಗೂ ಶಾರ್ಜಾ ನಾಡಲ್ಲಿ ಕನ್ನಡದ ಸಿನಿಮಾ ಬಿಡುಗಡೆಯಾಗುತ್ತಿದೆ. ಏಪ್ರಿಲ್ 26 ರಂದು ಮಸ್ಕತ್ ನಲ್ಲಿ 'ಟಗರು' ಪ್ರದರ್ಶನವಾದ್ರೆ, ಏಪ್ರಿಲ್ 27 ರಂದು ಶಾರ್ಜಾ ಮತ್ತು ದುಬೈನಲ್ಲಿ ಸ್ಕ್ರೀನಿಂಗ್ ಆಗಲಿದೆ. ಈ ಮೂಲಕ ಕರ್ನಾಟಕದ ಕನ್ನಡಿಗರು ನೋಡಿ ಖುಷಿ ಪಟ್ಟಿದ್ದ 'ಟಗರು' ಸಿನಿಮಾವನ್ನ ಜಗತ್ತಿನಾದ್ಯಂತ ಇರುವ ಕನ್ನಡಿಗರು ನೋಡುವಂತಹ ಅವಕಾಶ ಸಿಕ್ಕಿರುವುದಕ್ಕೆ ಕನ್ನಡಿಗರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಸಿನಿಮಾ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲೂ ಸಖತ್ ಸದ್ದು ಮಾಡಿತ್ತು. ಫೆಬ್ರವರಿ 23 ರಂದು ತೆರೆಕಂಡಿದ್ದ 'ಟಗರು' 50 ದಿನ ಪೂರೈಸಿ ಶತದಿನದತ್ತ ಮುನ್ನುಗ್ಗುತ್ತಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ರೆ, ಧನಂಜಯ್ ಮತ್ತು ವಸಿಷ್ಠ ಸಿಂಹ ಗ್ಯಾಂಗಸ್ಟರ್ ಪಾತ್ರಗಳಲ್ಲಿ ಮಿಂಚಿದ್ದರು. ಇವರ ಜೊತೆಯಲ್ಲಿ ಮಾನ್ವಿತಾ ಹರೀಶ್, ಭಾವನಾ, ಡಾನ್ ಅಂಕಲ್, ಕಾನ್ಸ್ ಟೇಬಲ್ ಸರೋಜಾ, ಕಾಕ್ರೋಚ್ ಅಂತಹ ಪಾತ್ರಗಳು ನೋಡುಗರಿಗೆ ಕ್ರೇಜ್ ಹುಟ್ಟಿಸಿದವು.

 

 

Edited By

Manjula M

Reported By

Manjula M

Comments