ಮೇಕಪ್ ಕಲಾವಿದನಿಗೆ ಕಾರ್ ಗಿಫ್ಟ್ ಕೊಟ್ಟ ನಟಿ

18 Apr 2018 10:04 AM | Entertainment
477 Report

ಸೆಲೆಬ್ರೆಟಿಗಳು ಎಂದರೆ ಎಲ್ಲರೂ ಕೂಡ ಒಂಥರಾ ಫೀಲ್ ಮಾಡ್ತಾರೆ. ಅವರು ಯಾರೋಮದಿಗೂ ಹೆಚ್ಚಾಗಿ ಮಾತನಾಡುವುದಿಲ್ಲ. ಬೆರೆಯುವುದಿಲ್ಲ. ಸೆಲೆಬ್ರಿಟಿಗಳು ಎಲ್ಲರೊಂದಿಗೆ ಸಹಜವಾಗಿ ಬೆರೆಯದೆ ಅಂತರ ಕಾಯ್ದುಕೊಳ್ಳುತ್ತಾರೆಂಬ ಮಾತಿದೆ.

ಆದರೆ ಇದಕ್ಕೆ ವಿರುದ್ದವಾಗಿಯೂ ಕೂಡ ಕೆಲವರು ಇದ್ದಾರೆ. ಈ ಸಾಲಿನಲ್ಲಿ ನಿಲ್ಲುವವರ ಪೈಕಿ ಬಾಲಿವುಡ್ ನಟಿ ಜಾಕ್ವೆಲೀನ್ ಫರ್ನಾಂಡೀಸ್ ಕೂಡ ಒಬ್ಬರು. ತಮ್ಮ ಸಹಾಯಕರನ್ನು ಕುಟುಂಬ ಸದಸ್ಯರಂತೆ ಕಾಣುವ ಜಾಕ್ವೆಲೀನ್ ಫರ್ನಾಂಡೀಸ್ ಸಹಾಯಕರ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ತಮ್ಮ ಮನೆಯ ಸಮಾರಂಭವೆಂಬಂತೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಜಾಕ್ವೆಲೀನ್ ಫರ್ನಾಂಡೀಸ್ ರ ಮೇಕಪ್ ಕಲಾವಿದ ಶಾನ್ ಇತ್ತೀಚೆಗೆ ತಮ್ಮ 34 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಇದು ಮತ್ತೊಂದು ಆಚರಣೆ ಎಂದು ಭಾವಿಸಿದ್ದ ಶಾನ್ ಗೆ ಜಾಕ್ವೆಲೀನ್ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದ್ದಾರೆ. ದುಬಾರಿ ಕಾರೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದನ್ನು ಕಂಡು ಶಾನ್ ಥ್ರಿಲ್ ಕೂಡ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಶಾನ್  ಜಾಕ್ವೆಲೀನ್ ಫರ್ನಾಂಡೀಸ್ ರ ಸರಳತೆಯನ್ನು ಮೆಚ್ಚಿಕೊಂಡು ಕೊಂಡಾಡಿದ್ದಾರೆ.

Edited By

Manjula M

Reported By

Manjula M

Comments

Cancel
Done