ರಕ್ಷಿತಾಗೆ ದರ್ಶನ್ ಜೊತೆ ನಟಿಸುವ ಆಸೆ ಈಗಲೂ ಇದೆಯಂತೆ..!

13 Apr 2018 12:18 PM | Entertainment
387 Report

ಸ್ಯಾಂಡಲ್ ವುಡ್ ನ ಬೆಸ್ಟ್ ಜೋಡಿಗಳಲ್ಲಿ ನಟ ದರ್ಶನ್ ಮತ್ತು ರಕ್ಷಿತಾ ಜೋಡಿ ಕೂಡ ಒಂದಾಗಿತ್ತು ಎಂದು ಹೇಳಬಹುದು. ಈ ಇಬ್ಬರು ಒಟ್ಟಿಗೆ ತೆರೆ ಮೇಲೆ ಬಂದರೆ ಮ್ಯಾಜಿಕ್ ಅಭಿಮಾನಿಗಳ ಕಣ್ಣುಕುಕ್ಕುವಂತೆ ಇರುತ್ತಿತ್ತು. ದರ್ಶನ್ ಮತ್ತು ರಕ್ಷಿತಾ ಒಟ್ಟಿಗೆ 'ಕಲಾಸಿಪಾಳ್ಯ', 'ಅಯ್ಯ', 'ಮಂಡ್ಯ', 'ಸುಂಟರಗಾಳಿ' ಸಿನಿಮಾದಲ್ಲಿಯೂ ಕೂಡ ನಟಿಸಿದ್ದರು.

ಈ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ರಕ್ಷಿತಾ ಸದ್ಯ ನಿರ್ಮಾಪಕಿಯಾಗಿ ಬಿಜಿ ಇದ್ದಾರೆ. ಅಲ್ಲದೆ ಅವರು ತೆರೆ ಮೇಲೆ ಬಂದು ಅನೇಕ ವರ್ಷಗಳೆ ಕಳೆದು ಹೋಗಿವೆ.. ಆದರೆ ಈಗ ಮತ್ತೆ ದರ್ಶನ್ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಇಷ್ಟ ರಕ್ಷಿತಾಗೆ ಇದೆಯಂತೆ. ಈ ವಿಷಯ ತಿಳಿದಿದ್ದು, 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ. ಹೌದು, ಈ ಕಾರ್ಯಕ್ರಮಕ್ಕೆ ಇದೀಗ ನಟಿ ರಕ್ಷಿತಾ ಮತ್ತು ರಾಗಿಣಿ ಆಗಮಿಸಿದ್ದಾರೆ. ಈ ಸಂಚಿಕೆಯ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ. ಕಾರ್ಯಕ್ರಮದಲ್ಲಿ ಶಿವಣ್ಣ ''ಈಗಿನ ಹೀರೋಗಳಲ್ಲಿ ನೀವು ಯಾರ ಜೊತೆಗೆ ಮತ್ತೆ ನಟನೆ ಮಾಡಲು ಇಷ್ಟ ಪಡುತ್ತೀರಾ ?'' ಎಂದು ಕೇಳಿದ ಪ್ರಶ್ನೆಗೆ , ರಕ್ಷಿತಾ ''ನನಗೆ ದರ್ಶನ್ ಜೊತೆಗೆ ಮತ್ತೆ ನಟಿಸುವ ಇಷ್ಟ ಇದೆ'' ಎಂದಿದ್ದಾರೆ.

Edited By

Manjula M

Reported By

Manjula M

Comments