ಶಾರುಖ್ ಪುತ್ರಿ ಮತ್ತು ಬಿಗ್ ಬಿ ಮೊಮ್ಮಗನ ಬಿಂದಾಸ್ ಪಾರ್ಟಿ

13 Apr 2018 11:00 AM | Entertainment
439 Report

ಶಾರುಖ್ ಖಾನ್ ಪುತ್ರಿ ಸುಹಾನ ಖಾನ್ ಗ್ಲಾಮರಸ್ ಬೆಡಗಿಯಾಗಿ ಬಾಲಿವುಡ್ ಎಂಟ್ರಿಗೆ ಸಜ್ಜಾಗಿರುವಂತಿದ್ಧಾರೆ. ಸುಹಾನ ಖಾನ್ ಈಗಾಗಲೇ ದೊಡ್ಡ ದೊಡ್ಡ ಸ್ಟಾರ್ ಮಕ್ಕಳ ಜೊತೆ ಸಖತ್ ಆಗಿಯೇ ಪಾರ್ಟಿ ಮಾಡುತ್ತಿದ್ದಾಳೆ.

ಸ್ವಿಮ್ಮಿಂಗ್, ಪಾರ್ಟಿ, ವೆಕೇಶನ್ ಅಂತೆಲ್ಲಾ ಬಿಂದಾಸ್ ಆಗಿ ಸುತ್ತಾಡ್ತಾಳೆ. ಅಮಿತಾಭ್ ಬಚ್ಚನ್ ಮೊಮ್ಮಗನಾದ ಅಗಸ್ತ್ಯ ನಂದಾ ಸೇರಿದಂತೆ ಇತರ ಸ್ನೇಹಿತರ ಜೊತೆಗೆ ಸುಹಾನಾ ಖಾನ್ ಪಾರ್ಟಿ ಮಾಡಿದ್ದು, ಫೋಟೋಗಳು ಈಗಾಗಲೇ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶ್ಲೋಕಾ ಬಿರ್ಲಾ ಹಾಗೂ ಅಜರ್ ದುಬಾಶ್ ಕೂಡ ಈ ಪಾರ್ಟಿಯಲ್ಲಿ ಜೊತೆಗಿದ್ರು. ಶ್ಲೋಕಾ, ಉದ್ಯಮಿಗಳಾದ ಅವಂತಿ ಹಾಗೂ ಯಶ್ ಬಿರ್ಲಾ ದಂಪತಿಯ ಪುತ್ರಿ. ಶಾರುಖ್ ಹಾಗೂ ಅಮಿತಾಭ್ ಬಚ್ಚನ್ ನಡುವೆ ಉತ್ತಮ ಒಡನಾಟವಿದೆ ಎಂದು ಹೇಳಬಹುದು. ಈಗ ಯುವ ಪೀಳಿಗೆ ಕೂಡ ಅದನ್ನು ಮುಂದುವರಿಸಿಕೊಂಡು ಹೋಗ್ತಿದೆ. ಬಿಗ್ ಬಿ ಮೊಮ್ಮಗ ಅಗಸ್ತ್ಯ ಹಾಗೂ ಶಾರುಖ್ ಪುತ್ರಿ ಸುಹಾನಾ ಮಧ್ಯೆ ಆತ್ಮೀಯ ಸ್ನೇಹ ಬೆಳೆಯುತ್ತಿದೆ ಎಂದರೆ ತಪ್ಪಾಗುವುದಿಲ್ಲ.

 

Edited By

Manjula M

Reported By

Manjula M

Comments