ಡಿ-ಬಾಸ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ:- ಕುರುಕ್ಷೇತ್ರ ಚಿತ್ರದ ಆಡಿಯೋಗೆ ಮೂಹೂರ್ತ ಫಿಕ್ಸ್

12 Apr 2018 2:17 PM | Entertainment
469 Report

ಚಿತ್ರದ ಶೂಟಿಂಗ್ ಮುಗಿಸಿ ಸದ್ದಿಲ್ಲದೆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಸಿಯಾಗಿರುವ ಕುರುಕ್ಷೇತ್ರ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ 50ನೇ ಸಿನಿಮಾ ಕುರುಕ್ಷೇತ್ರ ಆಡಿಯೋ ಬಿಡುಗಡೆಗೆ ವೇದಿಕೆ ಸಜ್ಜಾಗುತ್ತಿದೆ.

'ಕುರುಕ್ಷೇತ್ರ' ಚಿತ್ರದ ಆಡಿಯೋ ರೈಟ್ಸ್  ದುಬಾರಿ ಬೆಲೆಗೆ ಮಾರಾಟವಾಗಿದ್ದು, ಇದೇ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವ ತಯಾರಿ ನಡೆಸಲಾಗಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಏಪ್ರಿಲ್ ಅಂತ್ಯಕ್ಕೆ 'ಕುರುಕ್ಷೇತ್ರ' ಹಾಡುಗಳು ನಿಮ್ಮ ಮುಂದೆ ಬಂದು ರಂಜಿಸಬಹುದು. ಈ ಚಿತ್ರಕ್ಕೆ ವಿ ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ತಕ್ಕಂತೆ ಹಾಡುಗಳು ಮತ್ತು ಶ್ಲೋಕ, ಪದ್ಯಗಳು ಚಿತ್ರದಲ್ಲಿದೆ.

ಚಿತ್ರದ ಡಬ್ಬಿಂಗ್ ಕೆಲಸವೂ ಪೂರ್ತಿಯಾಗಿದ್ದು, ಚಿತ್ರದ ಪೈನಲ್ ಕಾಪಿ ಸಿದ್ದವಾಗಿದೆಯಂತೆ. ಈಗೇನಿದ್ರು ಸೆನ್ಸಾರ್ ಮಂಡಳಿ ಎದುರು ಸಿನಿಮಾ ಹೋಗಲಿದ್ದು, ಆದಷ್ಟೂ ಬೇಗ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ. ನಾಗಣ್ಣ ಈ ಚಿತ್ರಕ್ಕೆ ಆಕ್ಷನ್ ಹೇಳುತ್ತಿದ್ದು, ಮುನಿರತ್ನ ಅವರ ಬಂಡವಾಳವನ್ನು ಹಾಕಿದ್ದಾರೆ. ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಡಿ-ಬಾಸ್ ಅಭಿಮಾನಿಗಳು ಈ ಚಿತ್ರಕ್ಕೆ ಮತ್ತಷ್ಟು ದಿನ ಕಾಯಲೇಬೇಕು.

Edited By

Manjula M

Reported By

Manjula M

Comments