ಮೂರು ತಿಂಗಳಲ್ಲೆ ಟಕಿಲಾ ಸಾಂಗ್ ವೀವ್ಸ್ ಎಷ್ಟು ಅಂತ ಕೇಳುದ್ರೆ ಶಾಕ್ ಆಗ್ತೀರಾ?

07 Apr 2018 3:27 PM | Entertainment
669 Report

ಬಿಗ್ ಬಾಸ್ ವಿನ್ನರ್ ಯಾರು ಅಂತಾ ಕೇಳುದ್ರೆ ಚಿಕ್ಕ ಮಕ್ಕಳು ಕೂಡ ರ‍್ಯಾಪ್ ಸ್ಟೈಲ್ ನಲ್ಲಿಯೇ ಚಂದನ್ ಶೆಟ್ಟಿ ಅಂತಾರೆ. ರ‍್ಯಾಪ್ ಸಾಂಗ್ ನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಚಂದನ್ ಶೆಟ್ಟಿ ಬಿಗ್ ಮನೆಗೆ ಹೋಗಿ ಬಂದ ಮೇಲಂತೂ ಸಖತ್ ಹವಾ ಕ್ರಿಯೇಟ್ ಮಾಡಿಬಿಟ್ಟಿದ್ದಾರೆ.

ಬಿಗ್ ಬಾಸ್ ನ ವಿನ್ನರ್ ಶೆಟ್ಟಿ ಹವಾ ಎಷ್ಟಿದೆ ಅಂದ್ರೆ ಚಿಕ್ಕ ಮಕ್ಕಳು ಕೂಡ ಒಂದು ಡಬ್ಬ ಸಿಕ್ಕುದ್ರೆ ಸಾಕು ಬಡಿದುಕೊಂಡು ಹಾಡೋದಕ್ಕೆ ಶುರು ಮಾಡೇಬಿಡ್ತಾರೆ. ಇವರ ಟಕಿಲಾಸಾಂಗ್ ಹೊಸದೊಂದು ದಾಖಲೆಯನ್ನು ಕ್ರಿಯೇಟ್ ಮಾಡಿದೆ. ಯೂಟ್ಯೂಬ್ ನಲ್ಲಿ ಸಖತ್ ಕ್ರೇಜ್ ಮಾಡಿದ ಸಾಂಗ್ 2.53 ಕೋಟಿ ವೀವ್ಸ್ ದಾಟಿದೆ. ಚಂದನ್ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಟಕಿಲಾ ಸಾಂಗ್ ಕಿಚ್ಚ ಸುದೀಪ್ ಅವರು ಸಾಂಗ್ ಅನ್ನು ರಿಲೀಸ್ ಮಾಡಿದ್ದರು.  ಬಿಡುಗಡೆಯಾದ 17 ಗಂಟೆಗಳಲ್ಲಿಯೆ 1 ಮಿಲಿಯನ್ ಗೂ ಹೆಚ್ಚು ವೀವ್ಸ್ ಅನ್ನು ಕಂಡಿತ್ತು. ಇದೀಗ ಈ ಸಾಂಗ್ 2.53 ಕೋಟಿ ಬಾರಿ ವೀಕ್ಷಣೆಯಾಗಿದ್ದು 2.79 ಕ್ಕೂ ಹೆಚ್ಚು ಮೆಚ್ಚುಗೆಯನ್ನು ಪಡೆದಿದೆ. ಬಿಡುಗಡೆಯಾದ 17 ಗಂಟೆಯಲ್ಲಿಯೇ ಇದು 1 ಮಿಲಿಯನ್ ಬಾರಿ ವೀಕ್ಷಿಸಲ್ಪಟ್ಟು ದಾಖಲೆ ಬರೆದಿತ್ತು. ಇದೀಗ `ಟಕಿಲಾ’ ಸಾಂಗ್ 2.53 ಕೋಟಿ ಬಾರಿ ವೀಕ್ಷಣೆಯಾಗಿದ್ದು, 2.79 ಲಕ್ಷ ಲೈಕ್ಸ್ ಆಗಿದೆ. ಇದರಿಂದ ಚಂದನ್ ಶೆಟ್ಟಿಯವರು ತುಂಬಾ ಖುಷಿಯಾಗಿದ್ದಾರೆ.

 

Edited By

Manjula M

Reported By

Manjula M

Comments