ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ನ ‘ಚಮಕ್’ ಗೆ ಸೆಂಚೂರಿ ಸಂಭ್ರಮ

07 Apr 2018 10:10 AM | Entertainment
898 Report

ಸ್ಯಾಂಡಲ್ ವುಡ್:- ಚಮಕ್ ಚಿತ್ರ ಈಗಾಗಲೇ ಸೆಂಚೂರಿ ಬಾರಿಸಿದ್ದು ಸಖತ್ ಖುಷಿಯಲ್ಲಿದ್ದಾರೆ ಚಿತ್ರತಂಡ. ಬಿಡುಗಡೆಯಾದ ದಿನದಿಂದಲೂ ಕೂಡ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿರುವ ಚಿತ್ರ ಒಂದೊಳ್ಳೆ ಪ್ರೇಮ ದೃಶ್ಯ ಕಾವ್ಯವನ್ನು ತೆರೆ ಮೇಲೆ ತಂದಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದರು. ಚಮಕ್ ಚಿತ್ರಕ್ಕೆ ಸಿನಿ ರಸಿಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇಂದು ಜಿಟಿ ಮಾಲ್ ನಲ್ಲಿ ನಡೆಯುವ ಶೋ 100 ನೇ ಶೋ ಆಗಿದೆ. ಈ ಸಿನಿಮಾಗೆ ಟಿ.ಆರ್ ಚಂದ್ರಶೇಖರ್ ಬಂಡವಾಳವನ್ನು ಹೂಡಿದ್ದರು, ಸಂತೋಷ್ ರೈ ಮತ್ತು ಪಾತಾಜೆ ಕ್ಯಾಮೆರಾ ಕೈ ಚಳಕ ತೆರೆ ಮೇಲೆ ಚೆನ್ನಾಗಿ ಮೂಡಿಬಂದಿದೆ.

Edited By

Manjula M

Reported By

Manjula M

Comments