ಮಲಯಾಳಂ ನಟ ಕೊಲ್ಲಂ ಅಜಿತ್‌ ಇನ್ನಿಲ್ಲ

06 Apr 2018 12:38 PM | Entertainment
462 Report

ಮಲಯಾಳ ಚಿತ್ರನಟ ಕೊಲ್ಲಂ ಅಜಿತ್‌ (56) ಗುರುವಾರ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ಉದರ ಸಂಬಂಧಿ ಸಮಸ್ಯೆಯ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

1980ರಲ್ಲಿ ಚಿತ್ರರಂಗಕ್ಕೆ ಕಾಲಿರಿಸಿದ್ದ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳ ಸಿನಿಮಾಗಳಲ್ಲೂ ಖಳನಟನ ಪಾತ್ರದಲ್ಲಿ ಮಿಂಚಿದ್ದರು.

 

 

Edited By

Shruthi G

Reported By

Madhu shree

Comments