ಬುಂಗೀ ಜಂಪ್‌ ವೇಳೆ ಅವಘಡದಲ್ಲಿ ಬಾಲಿವುಡ್‌ ನಟಿಗೆ ಗಂಭೀರ ಗಾಯ

22 Mar 2018 12:37 PM | Entertainment
424 Report

ನಟಿ ನತಾಶಾ, ಖಾಸಗಿ ಕಂಪನಿಯ ಶೋ ರೂಮ್‌‌ವೊಂದರ ಉದ್ಘಾಟನೆಗೆಂದು ಇಂಡೋನೇಷ್ಯಾಗೆ ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಇವರನ್ನು ಆಹ್ವಾನಿಸಲಾಗಿತ್ತು. ಬ್ರ್ಯಾಂಡ್‌ ಕಂಪನಿಯ ಹೊಸ ಮಳಿಗೆ ಉದ್ಘಾಟನೆಯ ಬಳಿಕ ಬುಂಗೀ ಜಂಪ್‌ ಸಾಹಸಕ್ಕೆ ನತಾಶಾ ಮುಂದಾಗಿದ್ದರಂತೆ.

ಈ ವೇಳೆ ಬುಂಗೀ ಜಂಪ್‌ಗೆ ಬಳಸುವ ಹಗ್ಗ ತುಂಡಾಗಿದೆ. ಪರಿಣಾಮ ನತಾಶಾ ತಲೆ ಕೆಳಗಾಗಿ ಬಿದ್ದಿದ್ದಾರೆ. ಅದೃಷ್ಟಕ್ಕೆ ಈ ಸಾಹಸ ಕ್ರೀಡೆ ಸರೋವರದ ಮೇಲೆ ನಡೆಯುತ್ತಿದ್ದರಿಂದ ಅವರು ನೀರಿನ ಕಂದಕಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನತಾಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 24ಗಂಟೆಗಳ ನಂತರ ಅವರ ಆರೋಗ್ಯ ಪರಿಸ್ಥಿತಿ ಬಗ್ಗೆ ತಿಳಿಸಬಹುದು ಎಂದು ವೈದ್ಯರು ಹೇಳಿದ್ದಾರಂತೆ.

Edited By

Shruthi G

Reported By

Madhu shree

Comments