ಜಾತಿ ಬಗ್ಗೆ ಅಭಿಮಾನಿಗಳಿಗೆ ಪಾಠ ಹೇಳಿದ ಶಿವಣ್ಣ 

19 Mar 2018 2:21 PM | Entertainment
477 Report

ಸಿದ್ದಗಂಗಾ ಮಠಕ್ಕೆ ಏನೋ ಒಂದು ಪವರ್ ಇದೆ. ಮಠದ ಮಹಿಮೆಯೋ ಏನೋ ಎಲ್ಲಾ ಜಾತಿಗಳನ್ನು ಒಗ್ಗೂಡಿಸುತ್ತದೆ. ಮಠದಲ್ಲಿ ಜಾತಿ ಬೇಧ ಭಾವ ಇಲ್ಲಾ. ಅಂತಹ ಮಹಾನ್ ಮಠ ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಬೇಕು. ಹಾಗಾಗಿ ಜಾತಿ ನೋಡಿ ಮತ ಹಾಕಬೇಡಿ. ಒಳ್ಳೆ ಮನುಷ್ಯನಿಗೆ, ಒಳ್ಳೆ ಕೆಲಸ ಮಾಡೋರಿಗೆ ವೋಟ್ ಹಾಕಿ ಎಂದು ಹೇಳಿದ್ರು.

ಸಿದ್ದಗಂಗಾ ಮಠ ಆಧರಿಸಿದ ಭೂಸ್ವರ್ಗ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೆಂದು ಭಾನುವಾರದಂದು ನಟ ಶಿವರಾಜ್ ಕುಮಾರ್ ತುಮಕೂರಿನ ಉಡುಪಿ ಡಿಲಕ್ಸ್ ಗೆ ಹೋಗಿದ್ದರು. ಧ್ವನಿ ಸುರುಳಿ ಬಿಡುಗಡೆ ವೇಳೆ ಮಾತನಾಡಿದ ಶಿವಣ್ಣ, ಜಾತಿ ನೋಡಿ ಮತ ಹಾಕಬೇಡಿ, ಜಾತಿ ನೋಡಿ ಮರ್ಯಾದೆ ಕೊಡಬೇಡಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದ್ರು. ಈ ವೇಳೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಭಿಮಾನಿಗಳು ಮೊಬೈಲ್ ನಿಂದ ವಿಡಿಯೋ ಮಾಡುತ್ತಿದ್ದು, ಇದರಿಂದ ಕಿರಿಕಿರಿ ಅನುಭವಿಸಿದ ನಟ, ಪ್ಲೀಸ್ ಸೈಲೆನ್ಸ್ ಸೈಲೆನ್ಸ್ ಎಂದು ಒಂದೇ ಸಮನೇ ಕೂಗಿದ್ರು. ಅಲ್ಲದೇ ಮೊಬೈಲ್ ಯಾವ ಪುಣ್ಯಾತ್ಮ ಕಂಡು ಹಿಡಿದಿದ್ದಾನೋ ಎಂದು ಶಿವಣ್ಣ ರೇಗಿದ್ರು.

Edited By

Shruthi G

Reported By

Madhu shree

Comments