ಯುಗಾದಿ ಹಬ್ಬದಂದು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಶ್ರೀ ಮುರುಳಿ

19 Mar 2018 10:30 AM | Entertainment
366 Report

ಉಗ್ರಂ, ರಥಾವರ ಹಾಗೂ ಮಪ್ತಿಯಂತಹ ಚಿತ್ರಗಳಿಗೆ ಫುಲ್ ಮಾರ್ಕ್ಸ್ ಕೊಟ್ಟಿರುವ ಶ್ರೀ ಮುರಳಿ ಅಭಿಮಾನಿಗಳು ಅವರ ಮುಂದಿನ ಚಿತ್ರವನ್ನು ಕಾಯುತ್ತಿದ್ದಾರೆ. ಅಲ್ಲದೆ ಹಿಟ್ ಚಿತ್ರಗಳನ್ನು ನೀಡಿರುವ ಶ್ರೀ ಮುರುಳಿ ಅವರ ಮುಂದಿನ ಚಿತ್ರ ಕ್ಕೆ ಭಾರಿ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಈ ಸಾರಿ ಕೌಟಂಭಿಕ ಕಥಾಹಂದರವುಳ್ಳ ಚಿತ್ರದಲ್ಲಿ ನಟಿಸಲಿದ್ದಾರೆ ಭರ್ಜರಿ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ನಟ ಶ್ರೀ ಮುರುಳಿ ಅವರ ಮುಂದಿನ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಕಥೆ ಸಿದ್ದವಾಗಿದ್ದು, ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಆರಂಭವಾಗಿದೆ. ಚಿತ್ರದ ಕಲಾವಿದರು ಹಾಗೂ ನಾಯಕಿಯರ ಆಯ್ಕೆ ಪ್ರಕ್ರಿಯೆ ಇನ್ನೇನು ಆರಂಭವಾಗಲಿದೆ. ಈ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ ನಿರ್ಮಿಸುತ್ತದೆ ಎಂದು ಹೇಳಲಾಗಿದೆ.

Edited By

Shruthi G

Reported By

Madhu shree

Comments