ಶಿವಣ್ಣನ ಅಭಿಮಾನಿಗಳ ಆಕ್ರೋಶಕ್ಕೆ ನಟ ಧನಂಜಯ್ ಏನಂದ್ರು..?

27 Feb 2018 5:34 PM | Entertainment
517 Report

ಟಗರು ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಆದ್ರೆ, ಯಶಸ್ಸಿನ ಜೊತೆ ವಿವಾದವೂ ಅಂಟಿಕೊಂಡಿದೆ. ಚಿತ್ರದಲ್ಲಿ ಶಿವಣ್ಣನಿಗೆ ಧನಂಜಯ್ ಮತ್ತು ವಸಿಷ್ಠ ಸಿಂಹ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ ಎಂಬ ಧೋರಣೆಗೆ ಡಾಲಿ ಪಾತ್ರದಲ್ಲಿ ಮಿಂಚಿರುವ ಧನಂಜಯ್ ಈ ವಿವಾದದ ಬಗ್ಗೆ ಮಾತನಾಡಿದ್ದು, ಶಿವಣ್ಣನಿಗೆ ಬೈಯ್ದಿಲ್ಲ, ನೋವಾಗಿದ್ದರೇ ಕ್ಷಮಿಸಿ ಎಂದಿದ್ದಾರೆ. ಧನಂಜಯ್ ಅಂದ್ರು.

ಯಾಕಂದ್ರೆ, ರಿಯಾಲಿಸ್ಟಿಕ್ ಸಿನಿಮಾ. ಹಾಗೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವು. ಸಾಮಾನ್ಯವಾಗಿ ಕೆಲವು ಜನರು ಚಿಕ್ಕ ವಿಷ್ಯಗಳಿಗೆ ಕೆಲವು ಪದಗಳನ್ನ ಬಳಸುವುದು ಉಂಟು. ಇನ್ನು ರೌಡಿಗಳು. ಅದರಲ್ಲೂ ತುಂಬ ಕೆಟ್ಟ ರೌಡಿಗಳು ಅಂದಾಗ ಆ ರೀತಿ ಮಾತನಾಡುವ ಸಾಧ್ಯತೆ ಇದೆ ಎಂದು ಅಭಿಮಾನಿಗಳಿಗೆ ಮನವೊಲಿಸುವ ಪ್ರಯತ್ನ ಮಾಡಿದರು.ಇದು ಡಾಲಿ ಮತ್ತು ಟಗರು ಶಿವನ ನಡುವಿನ ದೃಶ್ಯ, ಚಿಟ್ಟೆ ಮತ್ತು ಶಿವ ಪಾತ್ರದ ನಡುವಿನ ದೃಶ್ಯ. ಇಲ್ಲಿ ಧನಂಜಯ್ ಆಗಲಿ, ವಸಿಷ್ಠ ಸಿಂಹ ಆಗಲಿ ಅಥವಾ ಶಿವಣ್ಣ ಅವರಗಾಲಿ ವೈಯಕ್ತಿಕವಾಗಿ ಬರುವುದಿಲ್ಲ. ಹೀಗಾಗಿ, ಆ ರೀತಿ ಯೋಚನೆ ಬಂದಿರಲಿಲ್ಲ. ಹೀಗೆ, ಯೋಚನೆ ಮಾಡ್ಕೊಂಡು ಸಂಪೂರ್ಣವಾಗಿ ಸಿನಿಮಾ ಪ್ರೀತಿಸಿ ಮಾಡಿಕೊಂಡು ಹೋಗಿದ್ದು. ಈಗ ರಿಲೀಸ್ ಆದ್ಮೇಲೆ ಇದರ ಪರಿಣಾಮ ಗೊತ್ತಾಗುತ್ತಿದೆ. ಮ್ಯೂಟ್ ಮಾಡುವ ಯೋಚನೆ ಮಾಡಿದ್ದಾರೆ ಎಂದರು.

Edited By

Shruthi G

Reported By

Madhu shree

Comments