ಮನಿ ಡಾಟ್ ಕಾಮ್ ನಲ್ಲಿ ಕ್ರೇಜಿಸ್ಟಾರ್..!!

19 Feb 2018 4:35 PM | Entertainment
577 Report

ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸಿನಿಮಾ ಬಿಟ್ಟರೆ ಬೇರೆ ಗಮನ ಹರಿಸಿದವರಲ್ಲ . ಅದರಲ್ಲಿಯೂ ಅವರಿಗೆ ಸಿನಿಮಾಲೋಕವೇ ಉಸಿರಾಗಿದ್ದನ್ನು ಇಡೀ ಕನ್ನಡ ನಾಡೇ ಗಮನಿಸಿದೆ,ಅದೂ ಸತ್ಯವೂ ಹೌದು. ಆದರೆ ಈಗ ಆರ್ಥಿಕ ಸಲಹೆ ನೀಡುವ ಇಂಡಿಯನ್ ಮನಿ ಡಾಟ್ ಕಾಮ್ ಸಂಸ್ಥೆಗೆ ಕರ್ನಾಟಕದ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿಕೊಂಡಿದ್ದಾರೆ .

ಜನಸಾಮಾನ್ಯರಿಗೆ ಆರ್ಥಿಕ ಶಿಕ್ಷಣದ ಮೂಲಕ ಸಲಹೆ ಸೂಚನೆ ಕೊಡುವ ಕೆಲಸವನ್ನು ಇಂಡಿಯನ್ ಮನಿ ಡಾಟ್ ಕಾಮ್ ಮಾಡಿಕೊಂಡು ಬರುತ್ತಿದೆ . ಆರ್ಥಿಕತೆ ಅಂದರೆ ಬರೀ ಹಣ ಸಂಪಾದಿಸುವುದು ಎನ್ನುವುದು ಸಾಮಾನ್ಯವಾಗಿದೆ . ಆದರೆ ಅದನ್ನು ಮೀರಿದ ನಿಜವಾದ ಹನಕಾಸಿನ ವ್ಯವಸ್ಥೆ ಹಾಗು ದಿನನಿತ್ಯದ ಜೀವನದಲ್ಲಿ ಹೇಗೆ ತನ್ನ ಪಾತ್ರ ನಿರ್ವಹಿಸುತ್ತದೆ ಎನ್ನುವ ಕುರಿತು ಈ ಸಂಸ್ಥೆ ಜನಸಾಮಾನ್ಯರಿಗೂ ತಿಳುವಳಿಕೆ ಮೂಡಿಸುತ್ತಿದೆ .

ಸಾಮಾಜಿಕ ಕಾಳಜಿಯುಳ್ಳ ಕಾರ್ಯಕ್ರಮಗಳನ್ನು ಮಾಡುವ ಆಸಕ್ತಿಯಿಂದ ಕ್ರೇಜಿಸ್ಟಾರ್ ರವಿಚಂದ್ರನ್ ಮನಿ ಡಾಟ್ ಕಾಮ್ ಸಂಸ್ಥೆಗೆ ರಾಯಬಾರಿಯಾಗಲು ಒಪ್ಪಿಕೊಂಡಿದ್ದಾರಂತೆ . ಈ ಸಂಸ್ಥೆಯ ಮೂಲಕ ಸಾಮಾನ್ಯ ಜನರಿಗೆ ಹಣಕಾಸಿನ ಅರಿವು ತುಂಬಾ ಅಗತ್ಯ ಎಂದು ರವಿಚಂದ್ರನ್ ಅವರಿಗೆ ಮನದಟ್ಟಾಗಿ . ಜನರಿಗೆ ಪ್ರಯೋಜನವಾಗುವ ಕೆಲಸ ಕಾರ್ಯ ಮಾಡುವ ಕಾರಣದಿಂದ ಇದರಲ್ಲಿ ಭಾಗಿಯಾಗಲು ಕ್ರೇಜಿಸ್ಟಾರ್ ಒಪ್ಪಿಕೊಂಡಿದ್ದಾರೆ .ಇಂಡಿಯನ್ ಮನಿ ಡಾಟ್ ಕಾಮ್ ಇಂದು ದೇಶಾಧ್ಯಂತ ಕಾರ್ಯ ನಿರ್ವಹಿಸುತ್ತಿದೆ . ಜನಸಾಮಾನ್ಯರಿಗೆ ಹಣದ ಮ್ಯಾನೇಜ್ ಮೆಂಟ್ , ಅದನ್ನು ಇನ್ಶೂರೆನ್ಸ್ ಮುಂತಾದವುಗಳ ಮೂಲಕ ಕಾಲ ಕಾಲಕ್ಕೂ ಉಪಯೋಗವಾಗುವಂತೆ ಶಿಕ್ಷಣ ಅರಿವು ನೀಡುತ್ತಿದೆ . ಪ್ರತೀ ದಿನ ಈ ಸಂಸ್ಥೆ ಲಕ್ಷ ಜನರಿಗೆ ಶಿಕ್ಷಣ ನೀಡುತ್ತಿದೆ . ಕರ್ನಾಟಕದಲ್ಲಿಯೂ ಹೆಚ್ಚು ಜನರಿಗೆ ಆರ್ಥಿಕ ಶಿಕ್ಷಣ ನೀಡುವ ಗುರಿ ಹೊಂದಿರುವ ಈ ಸಂಸ್ಥೆಗೆ ರವಿಚಂದ್ರನ್ ರಾಯಬಾರಿಯಾಗಿ ಸಾಥ್ ನೀಡುತ್ತಿದ್ದಾರೆ .

Edited By

Shruthi G

Reported By

Shruthi G

Comments