ನಿರ್ಮಾಪಕ ಮುನಿರತ್ನ ರಿಂದ ಚಂದನ್ ಶೆಟ್ಟಿಗೆ ಬಂಪರ್ ಆಫರ್…!!

15 Feb 2018 3:06 PM | Entertainment
996 Report

`ಬಿಗ್ ಬಾಸ್’ ಪಟ್ಟ ಗೆದ್ದ ನಂತರ ಚಂದನ್ ಶೆಟ್ಟಿಗೆ ಅದೃಷ್ಟ ಖುಲಾಯಿಸಿದ್ದು, ಪ್ರತಿದಿನ ಅವಕಾಶಗಳು ಬರುತ್ತಿವೆ.ಬಿಗ್ ಬಾಸ್ ವಿನ್ನರ್ ಆದ ಚಂದನ್ ಶೆಟ್ಟಿ ಖಾಸಗಿ ವಾಹಿನಿಯ `ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಸದ್ಯಕ್ಕೆ ಚಂದನ್ ಶೆಟ್ಟಿಗೆ ಡಿಮ್ಯಾಂಡ್ ಜೋರಾಗಿದ್ದು, ಸ್ಟಾರ್ ನಟನ ಮಟ್ಟಕ್ಕೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಿನಿಮಾದಲ್ಲಿ ಅವರಿಗಾಗಿ ಅನೇಕ ದೊಡ್ಡ ದೊಡ್ಡ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಸ್ಟಾರ್ ನಟರ ಸಿನಿಮಾಗೆ ಚಂದನ್ ಮ್ಯೂಸಿಕ್ ನೀಡುವ ಸುದ್ದಿ ಕೂಡ ಇದೆ. ಅಷ್ಟೇ ಅಲ್ಲದೇ ಇದರ ಜೊತೆಗೆ ಈಗ ಕನ್ನಡದ ನಿರ್ಮಾಪಕ ಮುನಿರತ್ನ ಕೂಡ ಚಂದನ್ ಗೆ ಬಂಪರ್ ಆಫರ್ ನೀಡಿದ್ದಾರೆ. ಮುನಿರತ್ನ ಅವರು ತಮ್ಮ ಮುಂದಿನ ನಿರ್ಮಾಣದ ಸಿನಿಮಾಗೆ ಸಂಗೀತ ನೀಡುವಂತೆ ಚಂದನ್ ಶೆಟ್ಟಿಗೆ ಅವಕಾಶ ನೀಡಿದ್ದಾರೆ.ಮುನಿರತ್ನ ಇತ್ತೀಚಿಗೆ ಶಿವರಾತ್ರಿ ಪ್ರಯುಕ್ತ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಕೂಡ ಭಾಗಿಯಾಗಿದ್ದರು. ಈ ವೇಳೆ ಮುನಿರತ್ನ ಅವರು ಚಂದನ್‍ಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾರೆ. ನಿರ್ಮಾಪಕ ಮುನಿರತ್ನ ಕಡೆಯಿಂದ ಬಂದ ಈ ದೊಡ್ಡ ಆಫರ್ ನನ್ನು ಚಂದನ್ ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದಾರೆ.

Edited By

Shruthi G

Reported By

Shruthi G

Comments