ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ವಿವಾಹವಾರ್ಷಿಕೋತ್ಸವದ ಸಡಗರ

12 Feb 2018 12:58 PM | Entertainment
474 Report

ಮುಂಗಾರು ಮಳೆ ಸಿನಿಮಾದಿಂದ ಬಿಗ್ ಹಿಟ್ ಕಂಡು ಸಿನಿ ಜೀವನದಲ್ಲಿ ಜಾದು ಮೂಡಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಶಿಲ್ಪಾ ಅವರನ್ನು ಕೈ ಹಿಡಿದು ಹತ್ತು ವರ್ಷಗಳು ಕಳೆದು ಹೋಗಿವೆ. ಈ ವರ್ಷ ಗೋಲ್ಡನ್ ವರ್ಷವೆಂದೇ ಹೇಳಬಹುದು.

2008 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳಿದ್ದಾರೆ . ಚಾರಿತ್ರಿಯಾ ಮತ್ತು ವಿಹಾನ್ ಎಂಬ ಮುದ್ದಾದ ಎರಡು ಮಕ್ಕಳ ತಂದೆತಾಯಿ ಇವರು . ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ' ಆರೇಂಜ್ ' ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಆರೆಂಜ್' ಚಿತ್ರದ ಮುಹೂರ್ತ ಸಮಾರಂಭ ನಿನ್ನೆ ಗಣೇಶ್-ಶಿಲ್ಪಾ ಅವರ ಹತ್ತನೇ ವಿವಾಹ ವಾರ್ಷಿಕೋತ್ಸವದಂದೇ ನೆರವೇರಿತು. ಬೆಂಗಳೂರಿನ ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ 'ಆರೆಂಜ್' ಮುಹೂರ್ತ ನಡೆಯಿತು.

Edited By

Shruthi G

Reported By

Madhu shree

Comments