ನಾಳೆ ತೆರೆ ಮೇಲೆ ಮಿಂಚಲಿರುವ ಪ್ರೇಮಬರಹ..!

08 Feb 2018 6:34 PM | Entertainment
367 Report

ಪ್ರೇಮ ಬರಹ ಚಿತ್ರದ ಟ್ರೇಲರ್ ನಲ್ಲಿ ಐಶ್ವರ್ಯಾ ಹಾಗೂ ಚಂದನ್ ಅವರ ದೃಶ್ಯಗಳು ಗಮನಸೆಳೆದಿವೆ. ಕಿರುತೆರೆಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಚಂದನ್ ಇಲ್ಲಿಯೂ ಮೋಡಿ ಮಾಡಿದ್ದಾರೆ. ಸ್ಯಾಂಡಲ್ ವುಡ್ ತಾರೆಗಳ ಗಮನಸೆಳೆದ 'ಪ್ರೇಮ ಬರಹ' ನಾಳೆ ಬಿಡುಗಡೆಯಾಗ್ತಿದ್ದು, ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ.

ಅರ್ಜುನ್ ಸರ್ಜಾ ಚಿತ್ರ ನಿರ್ದೇಶಿಸಿದ್ದು, ನಿರ್ಮಾಣ ಮಾಡಿದ್ದಾರೆ. ಹನುಮನ ಹಾಡಿನಲ್ಲಿ ಸರ್ಜಾ ಫ್ಯಾಮಿಲಿಯೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಅರ್ಜುನ್ ಸರ್ಜಾ, ಧೃವ ಸರ್ಜಾ, ಚಿರಂಜೀವಿ ಸರ್ಜಾ ಅವರೊಂದಿಗೆ ದರ್ಶನ್ ಸ್ಟೆಪ್ ಹಾಕಿದ್ದಾರೆ.

Edited By

Shruthi G

Reported By

Madhu shree

Comments