ವಿರಾಟ್ ಕೊಹ್ಲಿಗೆ ಅತ್ತೆ - ಮಾವನಿಂದ ವ್ಯಾಲೆಂಟೈನ್ಸ್ ಡೇ ಗೆ ಭರ್ಜರಿ ಗಿಫ್ಟ್ ..!

08 Feb 2018 5:27 PM | Entertainment
610 Report

ಪ್ರೇಮಿಗಳ ದಿನದಂದು ದೂರ ಇರಲಿರುವ ಜೋಡಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ವಿರಾಟ್ ಕೊಹ್ಲಿ ಅತ್ತೆ-ಮಾವ, ಮಗಳು-ಅಳಿಯನಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ನೀಡಿತ್ತಿದ್ದರಂತೆ ಈಗ ಕೆಲಸದಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ವ್ಯಾಲೆಂಟೈನ್ಸ್ ವೀಕನ್ನು ಇಬ್ಬರೂ ಒಟ್ಟಿಗೆ ಎಂಜಾಯ್ ಮಾಡಲು ಸಾಧ್ಯವಾಗ್ತಿಲ್ಲ.

ಅದಕ್ಕಾಗಿ ಅನುಷ್ಕಾ ತಂದೆ ನಿವೃತ್ತ ಕರ್ನಲ್ ಅಜಯ್ ಕುಮಾರ್ ಶರ್ಮಾ ಪತ್ನಿ ಜೊತೆ ಹೊಸ ಲೇಖಕಿ ತೇಜಸ್ವಿನಿ ದಿವ್ಯ ನಾಯ್ಕ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಈ ವೇಳೆ ಲೇಖಕಿ ಸಹಿಯಿರುವ ರೋಮ್ಯಾಂಟಿಕ್ ಕವನ ಸಂಗ್ರಹವನ್ನು ತಮ್ಮ ಅಳಿಯ-ಮಗಳಿಗಾಗಿ ತೆಗೆದಿಟ್ಟಿದ್ದಾರೆ. ರೋಮ್ಯಾಂಟಿಕ್ ಕವನ ಸಂಗ್ರಹ ನೋಡಿ ಅನುಷ್ಕಾ ಹಾಗೂ ಕೊಹ್ಲಿ ಖುಷಿಯಾಗೋದು ನಿಶ್ಚಿತ. ಕೊಹ್ಲಿ, ಅನುಷ್ಕಾ ಕೈ ಹಿಡಿದು 2 ತಿಂಗಳಾಗಿದೆ. ಆದ್ರೆ ಈಗ್ಲೂ ನವ ಜೋಡಿಗೆ ಶುಭಾಶಯಗಳು ಹರಿದು ಬರ್ತಿವೆ.

Edited By

Shruthi G

Reported By

Madhu shree

Comments