'ಕಾಫಿ ವಿತ್ ಕರಣ್' ಶೋನಲ್ಲಿ ಕಾಣಿಸಿಕೊಳ್ಳಲಿರುವ ವಿರಾಟ್ ಅನುಷ್ಕಾ ಜೋಡಿ

07 Feb 2018 4:32 PM | Entertainment
407 Report

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾಸತಿಪತಿಗಳಾದ್ಮೇಲೆ ಪರಸ್ಪರರ ಮೇಲಿರುವ ಪ್ರೀತಿಯನ್ನು ಇಬ್ಬರೂ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. 150 ರನ್ ಸಿಡಿಸಿದ ಬಳಿಕ ಕೊಹ್ಲಿ ತಮ್ಮ ವೆಡ್ಡಿಂಗ್ ರಿಂಗ್ ಗೆ ಮುತ್ತಿಕ್ಕಿದ್ದರು. ಕೊಹ್ಲಿ 33ನೇ ಏಕದಿನ ಶತಕ ಬಾರಿಸಿದ ಬಳಿಕ ಅನುಷ್ಕಾ ತಮ್ಮ ಖುಷಿಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ರು.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕಳೆದ ಡಿಸೆಂಬರ್ ನಲ್ಲಿ ಮದುವೆಯಾಗಿದ್ದಾರೆ. ಅದಾದ್ಮೇಲೆ ಈ ಜೋಡಿಯ ಫೋಟೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದವು. ಈ ಪವರ್ ಕಪಲ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಬಹುದು. ಯಾಕಂದ್ರೆ ವಿರಾಟ್ ಹಾಗೂ ಅನುಷ್ಕಾ, ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಜೊತೆಯಾಗಿ ಟಿವಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Edited By

Shruthi G

Reported By

Madhu shree

Comments