ಹಾಸ್ಯ ನಟನೆ ಮಾತ್ರವಲ್ಲದೆ ನಿರ್ಮಾಪಣೆಗೂ ಸೈಎಂದ ನಟ ಚಿಕ್ಕಣ್ಣ

07 Feb 2018 3:34 PM | Entertainment
523 Report

ಚಿಕ್ಕಣ್ಣ ಅವರ ನಾಲ್ಕೈದು ಸಿನಿಮಾಗಳು ರಿಲೀಸ್ ಆಗುವ ಮಟ್ಟಿಗೆ ಬಿಜಿ ಆದರು. ಆ ಬಳಿಕ ಎಲ್ಲ ಹಾಸ್ಯ ನಟನರಂತೆ ಚಿಕ್ಕಣ್ಣ ಕೂಡ ಹೀರೋ ಆಗುತ್ತಾರೆ ಎಂಬ ಸುದ್ದಿ ಸಹ ಕೇಳಿ ಬಂದಿತ್ತು. ಆದರೆ ಈಗ ಹೀರೋ ಬದಲು ಅವರು ನಿರ್ಮಾಪಕ ಆಗಿದ್ದಾರೆ. ಶರಣ್ ಅಭಿನಯದ 'ರಾಂಬೋ 2' ಸಿನಿಮಾದ ಮೂಲಕ ನಟ ಚಿಕ್ಕಣ್ಣ ನಿರ್ಮಾಪಕ ಆಗಿದ್ದಾರೆ.

ಈ ಚಿತ್ರದ ನಿರ್ಮಾಪಕರ ಪೈಕಿ ಅವರು ಒಬ್ಬರಾಗಿದ್ದಾರೆ. ಚಿಕ್ಕಣ್ಣ ಮಾತ್ರವಲ್ಲದೆ ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಅನೇಕ ತಂತ್ರಜ್ಞರು ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಎಲ್ಲ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ರಾಂಬೋ 2' ಸಿನಿಮಾ ಒಂದು ಕಾಮಿಡಿ ಸಿನಿಮಾವಾಗಿದೆ. ಅನಿಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಶರಣ್ ಮತ್ತು ಆಶಿಕಾ ಜೋಡಿಯಾಗಿದ್ದಾರೆ. ಚಿಕ್ಕಣ್ಣ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಇನ್ನೊಂದು ಹಾಡನ್ನು ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಡಿದ್ದಾರೆ ನಿನ್ನೆ ಶರಣ್ ಹುಟ್ಟುಹಬ್ಬದ ವಿಶೇಷವಾಗಿ 'ರಾಂಬೋ 2' ಸಿನಿಮಾದ 'ಯವ್ವ ಯವ್ವ..' ಎಂಬ ಒಂದು ಹಾಡಿನ ಟೀಸರ್ ರಿಲೀಸ್ ಆಗಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡು ದೊಡ್ಡ ಜನಪ್ರಿಯತೆ ಗಳಿಸುತ್ತಿದೆ. ತಮ್ಮ 'ರಾಂಬೋ 2' ಸಿನಿಮಾದ ಬಗ್ಗೆ ಮಾತನಾಡಿರುವ ಚಿಕ್ಕಣ್ಣ ''ಶರಣ್ ಸರ್ ಮತ್ತು ನಾನು ಈ ಹಿಂದೆ ಮಾಡಿದ ಸಿನಿಮಾಗಳು ಹಳ್ಳಿಯ ಹಿನ್ನಲೆಯ ಕಥೆ ಹೊಂದಿತ್ತು. ಆದರೆ ಈ ಸಿನಿಮಾ ಜರ್ನಿಯಲ್ಲಿ ನಡೆಯುತ್ತದೆ. ಸಿನಿಮಾದ ಚಿತ್ರೀಕರಣವನ್ನು ರಾಮೇಶ್ವರ, ರಾಜಸ್ಥಾನ, ಗೋವದಲ್ಲಿ ಮಾಡಿದ್ದೇವೆ'' ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

Edited By

Shruthi G

Reported By

Madhu shree

Comments