ನಿಖಿಲ್ ಕುಮಾರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ 'ಕಾಮಿಡಿ ಕಿಲಾಡಿ' ನಯನ

03 Feb 2018 11:36 AM | Entertainment
314 Report

ಸೀತಾರಾಮ ಕಲ್ಯಾಣ' ಸಿನಿಮಾವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಿಖಿಲ್ ಜೊತೆಗೆ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಸದ್ಯ ನಡೆಯುತ್ತಿದೆ. ವಿಶೇಷ ಅಂದರೆ ಈ ಸಿನಿಮಾದ ಒಂದು ಪಾತ್ರದಲ್ಲಿ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನ ಕಾಣಿಸಿಕೊಳ್ಳಲಿದ್ದಾರೆ.

'ಕುರುಕ್ಷೇತ್ರ' ನಂತರ ನಿಖಿಲ್ ಕುಮಾರ್ 'ಸೀತಾರಾಮ ಕಲ್ಯಾಣ' ಸಿನಿಮಾ ಮಾಡುತ್ತಿದ್ದಾರೆ.  'ಕಾಮಿಡಿ ಕಿಲಾಡಿಗಳು' ಮೂಲಕ ಫೇಮಸ್ ಆದ ನಯನ ಈಗಾಗಲೇ ಕೆಲ ಸಿನಿಮಾ ಮಾಡಿದ್ದಾರೆ. ಅದರ ಜೊತೆಗೆ ಈಗ ಈ ಚಿತ್ರದಲ್ಲಿಯೂ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಈ ಸಿನಿಮಾದ ಜೊತೆಗೆ ನಯನ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಕುರಿ ಪ್ರತಾಪ್ ಮತ್ತು ನಯನ ಕಾಂಬಿನೇಶನ್ ನಲ್ಲಿ ಬರುತ್ತಿರುವ ಈ ಸಿನಿಮಾಗೆ 'ಮಿಸ್ಟರ್ ಜೈ' ಎನ್ನುವ ಹೆಸರು ಇಡಲಾಗಿದೆ. ಇಷ್ಟು ದಿನ ತಮ್ಮ ಸಿನಿಮಾಗಳಲ್ಲಿ ಆಂಜನೇಯನ ಆರಾಧನೆ ಮಾಡುತ್ತಿದ್ದ ಹರ್ಷ ಈಗ ಶ್ರೀ ರಾಮನ ನಾಮ ಹಾಡುತ್ತಿದ್ದಾರೆ. ಈ ಸಿನಿಮಾವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. 'ಸೀತಾರಾಮ ಕಲ್ಯಾಣ' ಹಳ್ಳಿಯಲ್ಲಿ ನಡೆಯುವ ಕಥೆ ಆಗಿದೆ. ಈ ಹಿಂದೆ ಬಂದ 'ಚಂದ್ರಚಕೋರಿ' ಚಿತ್ರದ ಮಾದರಿಯಲ್ಲಿ ಈ ಸಿನಿಮಾ ಇರಲಿದೆ.


Edited By

Shruthi G

Reported By

Madhu shree

Comments