ಬಿಗ್ ಬಾಸ್ ಸ್ಪರ್ಧಿಗಳ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ?

02 Feb 2018 4:48 PM | Entertainment
371 Report

ಫೆ. 19 ರಂದು ಬಿಗ್ ಬಾಸ್ ಸ್ಪರ್ಧಿಗಳ ಎರಡು ಚಿತ್ರಗಳು ಮುಹೂರ್ತ ನಡೆಯಲಿವೆ. ಇತ್ತಿಚೆಗಷ್ಟೇ ಬಿಗ್ ಬಾಸ್ ಸ್ಪರ್ಧೆಯನ್ನು ಮುಗಿಸಿಕೊಂಡು ಬಂದಿರುವ ಎಲ್ಲಾ ಸ್ಪರ್ಧಿಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಯಾಳ ಪದ್ಮನಾಭನ್ ಅವರ ನಿರ್ದೇಶನದಲ್ಲಿ "ಕರಾಳ ರಾತ್ರಿ" ಎಂಬ ಹೊಸ ಸಿನಿಮಾ ಆರಂಭಗೊಳ್ಳಲಿದ್ದು, ಈ ಚಿತ್ರದಲ್ಲಿ ಜೆಕೆ, ಜಯ ಶ್ರೀನಿವಾಸನ್, ಸಿಹಿಕಹಿ ಚಂದ್ರು, ಅನುಪಮಾ ಗೌಡ ಅಭಿನಯಿಸಲಿದ್ದಾರೆ.

ಈ ಚಿತ್ರದ ಜೊತೆ "ಪುಟ 109" ಎಂಬ ಚಿತ್ರವನ್ನು ದಯಾಳ ಅವರೇ ನಿರ್ದೇಶನ ಮಾಡಲಿದ್ದು, ಈ ಚಿತ್ರದಲ್ಲಿ ನವೀನ ಕೃಷ್ಣ ಹಾಗೂ ಜೆಕೆ ಇಬ್ಬರೇ ನಟಿಸಲಿದ್ದಾರೆ. ಇವೆರಡೂ ಚಿತ್ರಗಳು ಸಸ್ಪೆನ್ಸ್ ಕಥಾಹಂದರವನ್ನು ಹೊಂದಿವೆ. ಈಗಾಗಲೇ ಹಗ್ಗದಕೊನೆ, ಆಯಕ್ಟರ್ ಎಂಬ ಪ್ರಯೋಗಾತ್ಮಕ ಚಿತ್ರಗಳನ್ನು ಕೊಟ್ಟಿದ್ದ ದಯಾಳ್ ಅವರು ಈ ಸಾರಿ ಮತ್ತೊಮ್ಮೆ ಪ್ರಯೋಗಾತ್ಮಕ ಚಿತ್ರಗಳನ್ನು ಕೊಡಲು ರೆಡಿಯಾಗಿದ್ದಾರೆ 

 

Edited By

Shruthi G

Reported By

Madhu shree

Comments