ಪುಟ್ಟ ಗೌರಿ ಖ್ಯಾತಿಯ ರಂಜನಿ ರಾಘವನ್ ಗೆ ಬಂಪರ್ ಆಫರ್ ಸಿಕ್ಕಿದೆ..!!

29 Jan 2018 5:05 PM | Entertainment
567 Report

ರಂಜನಿ ಅವರನ್ನ ಧಾರಾವಾಹಿಯ ಜೊತೆಯಲ್ಲಿ ಸಾಲು ಸಾಲು ಸಿನಿಮಾಗಳ ಆಫರ್ ಹುಡುಕಿಕೊಂಡು ಬರುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೌತುಕವನ್ನ ಹುಟ್ಟುಹಾಕಿರುವ ಚಿತ್ರಕ್ಕೆ ರಂಜನಿ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಹಾಗಾದರೇ ಪುಟ್ಟಗೌರಿ ಅಭಿನಯಿಸುತ್ತಿರುವ ಆ ಸಿನಿಮಾ ಯಾವುದು? ಎಷ್ಟು ಚಿತ್ರಗಳು ರಂಜನಿ ಕೈನಲ್ಲಿವೆ ?

ನಟಿ ರಂಜನಿ ರಾಘವನ್ ಟಕ್ಕರ್ ಚಿತ್ರದ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ದರ್ಶನ್ ಸಹೋದರ ಸಂಬಂಧಿ ಮನೋಜ್ ಅವರ ಜೋಡಿಯಾಗಿ ರಂಜಿನಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ.  ಮನೋಜ್ ಅಭಿನಯದ ಟಕ್ಕರ್ ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸುವಂತಹ ನಟಿ ಬೇಕಾಗಿತ್ತಂತೆ. ಇದೇ ಕಾರಣಕ್ಕೆ ನಿರ್ದೇಶಕ ರಘುಶಾಸ್ತ್ರಿ ರಜನಿ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ ಆಯೋಜಿತವಾಗಿದ್ದ 'ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017'ರಲ್ಲಿ ಭಾಗವಹಿಸಿದ್ದ ರಂಜನಿ ರಾಘವನ್ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಈ ವರ್ಷದ ಮಿಸ್ ಇಂಡಿಯಾ ಸೂಪರ್ ಮಾಡೆಲ್ ತಮ್ಮದಾಗಿಸಿಕೊಂಡಿದ್ದಾರೆ.

Edited By

Shruthi G

Reported By

Madhu shree

Comments