ಕಾನೂನು ಬಾಹಿರ ಕೆಲಸ ಮಾಡಿದ ಚಾಲೆಂಜಿಂಗ್ ಸ್ಟಾರ್?

23 Jan 2018 11:24 AM | Entertainment
625 Report

 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಖರೀದಿಸಿರುವ ದುಬಾರಿ ಲ್ಯಾಂಬೋರ್ಗಿನಿ ಅವೆಂಟಡಾರ್ ಹೈ-ಎಂಡ್ ಸ್ಫೋರ್ಟ್ಸ್ ಕಾರಿನ ವಿಷಯ ನಮಗೆ ಗೊತ್ತೇ ಇದೆ. ಅಂದ ಹಾಗೇ ಈ ಕಾರು ಪುದುಚೇರಿ ರಿಜಿಸ್ಟ್ರೇಷನ್ ಸಂಖ್ಯೆ (PY01 CD 5008) ಹೊಂದಿರುವುದೇ ಇಷ್ಟೆಲ್ಲ ವಿವಾದಗಳಿಗೆ ಕಾರಣವಾಗಿದೆ.

ಕರ್ನಾಟಕಕ್ಕೆ ಹೋಲಿಸಿದರೆ ಪುದುಚೇರಿಯಲ್ಲಿ ಲೈಫ್ಟೈಮ್ ಟ್ಯಾಕ್ಸ್ ತುಂಬಾ (ಕನಿಷ್ಠಪಕ್ಷ ಶೇ.20) ಕಡಿಮೆ ಇದ್ದು ಪುದುಚೇರಿಯಲ್ಲಿ ನೋಂದಣಿಯಾಗಿ ಕರ್ನಾಟಕಕ್ಕೆ ನಟ ದರ್ಶನ್ ಕಾರು ತಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಇದು ನಿಜ ಕೂಡ ಆಗಿದೆ ಎನ್ನುತ್ತೀವೆ ಸುದ್ದಿ ಮೂಲಗಳು.ಇವೆಲ್ಲದರ ನಡುವೆ ಸಾರಿಗೆ ಇಲಾಖೆ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದು ಪುದುಚೇರಿಯಲ್ಲಿ ರಿಜಿಸ್ಟ್ರೇಷನ್ (ಪಿವೈ) ಮಾಡಿಕೊಂಡು ಬೆಂಗಳೂರಿನಲ್ಲಿ ಓಡಾಡುತ್ತಿರುವ ಕಾರುಗಳ ಮೇಲೆ ಒಂದು ಕಣ್ಣಿಡುವಂತೆ ಆದೇಶಿಸಿದೆ ಎನ್ನಲಾಗಿದೆ. ಇದಲ್ಲದೇ ಪುದುಚೇರಿಯಲ್ಲಿ ನೋಂದಣಿಯಾಗಿರುವ ಕಾರನ್ನು ಖರೀಸಿರುವವರಲ್ಲಿ ಈಗ ದರ್ಶನ್ ಮೊದಲಿಗರಾಗಿದ್ದು ಸಹಜವಾಗಿ ಆರ್‍ ಟಿ ಓ ಅಧಿಕಾರಿಗಳು ದರ್ಶನ್ 'ಲ್ಯಾಂಬೋರ್ಗಿನಿ' ಕಾರಿನ ಮೇಲೆ ಕಣ್ಣೀಟ್ಟಿದ್ದಾರೆ.

ಇದಲ್ಲದೇ ಪುದುಚೇರಿ ರಿಜಿಸ್ಟ್ರೇಷನ್ ಕಾರು ಖರೀದಿಸುವ ಮೂಲಕ ದರ್ಶನ್ ಅವರೇನು ಕಾನೂನು ಬಾಹಿರ ಕೆಲಸವೇನು ಮಾಡಿಲ್ಲ ಅಂತ ಸಾರಿಗೆ ಕಾನೂನುಗಳು ಹೇಳುತ್ತಿವೆ. ಕರ್ನಾಟಕದ ಹೊರಗೆ ರಿಜಿಸ್ಟ್ರೇಷನ್ ಮಾಡಿಕೊಂಡವರು ಒಂದು ವರ್ಷದ ತನಕ ನಮ್ಮ ರಾಜ್ಯದಲ್ಲಿ ಕಾರನ್ನು ಓಡಿಸಬಹುದು, ಆದರೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇಲ್ಲೇ ಇದ್ದರೆ ಆಗ ಸ್ಥಳೀಯ ಪ್ರಾಧಿಕಾರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ ಎನ್ನುತ್ತವೆ ಸಾರಿಗೆ ಇಲಾಖೆ ಕಾನೂನುಗಳು.

Edited By

Shruthi G

Reported By

Madhu shree

Comments