ಡಿಫರೆಂಟ್ ಹಾಗೆ ಹುಟ್ಟು ಹಬ್ಬ ಆಚರಿಸಿಕೊಂಡ ಬ್ಲಾಕ್ ಕೋಬ್ರಾ ದುನಿಯಾ ವಿಜಯ್

20 Jan 2018 10:24 AM | Entertainment
367 Report

ಸ್ಯಾಂಡಲ್ವುಡ್ ನ ಬ್ಲಾಕ್ ಕೋಬ್ರಾ ಎಂದೇ ಪ್ರಖ್ಯಾತಿ ಹೊಂದಿರುವ ನಟ ದುನಿಯಾ ವಿಜಿಗೆ ಇಂದು ತಮ್ಮಬರ್ತ್ ಡೇ ಸೆಲೆಬ್ರೇಶನ್ ಮೂಡ್ ನಲ್ಲಿದ್ದಾರೆ. ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವುದಕ್ಕೆ ವಿಜಯ್ ಅಂತಸ ವ್ಯಕ್ತಪಡಿಸಿದರು. ಗದಗದ ಅಡವಿ ಸೋಮನಹಳ್ಳಿಯಲ್ಲಿ ಜಯಮ್ಮನ ಮಗ ವಿಜಯ್ ಅಭಿಮಾನಿಗಳು ಮಧ್ಯರಾತ್ರಿ ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸಿದರು. ಬ್ಲಾಕ್ ಕೋಬ್ರಾ ಭಾವಚಿತ್ರದ ಎದುರು ಹೋಮ ಹವನ ಮಾಡಿದ್ರು.

44ನೇ ವಸಂತಕ್ಕೆ ಕಾಲಿರಿಸಿದ ನಟ ದುನಿಯಾ ವಿಜಯ್ ಗೆ ಎಲ್ಲರೂ ಶುಭಾಶಯ ಕೋರಿದ್ದಾರೆ. ಮಧ್ಯ ರಾತ್ರಿಯಿಂದಲೇ ಹೊಸಕೆರೆ ಹಳ್ಳಿಯಲ್ಲಿ ಇರುವ ದುನಿಯಾ ವಿಜಿ ಮನೆ ಮುಂದೆ ಜಮಾಯಿಸಿದ ನೂರಾರು ಅಭಿಮಾನಿಗಳು ಜಯಘೋಷ ಕೂಗಿದರು. ಅಭಿಮಾನಿಗಳ ಸಮ್ಮುಖದಲ್ಲೇ ವಿಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ದುನಿಯಾ ವಿಜಿ ಅಭಿಮಾನಿಗಳು ಘೋಷಣೆ ಕೂಗಿ ನೆಚ್ಚಿನ ನಟನಿಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ. ಇನ್ನು ದುನಿಯಾ ವಿಜಿ ದಾವಣಗೆರೆಯ ಐವರು ಅಭಿಮಾನಿಗಳು ಸೈಕಲ್ ಜಾಥಾ ಮೂಲಕ ಆಗಮಿಸಿದ್ದು ವಿಶೇಷವಾಗಿತ್ತು. ಇದೇ ತಿಂಗಳ 26 ಕ್ಕೆ ರಿಲೀಸ್ ಆಗ್ತಿರೋ ಕನಕ ಚಿತ್ರದ ಪ್ರಚಾರ ಹಾಗೂ ವಿಜಿಯವರಿಗೆ ವಿಶ್ ಮಾಡಲು ಬಂದಿರುವುದಾಗಿ ಅಭಿಮಾನಿಗಳು ತಿಳಿಸಿದರು. 

 

 

Edited By

Shruthi G

Reported By

Madhu shree

Comments