ಆಸ್ಕರ್ ನಲ್ಲಿ ನಿರಾಸೆ ಕಂಡಿದ್ದ ನ್ಯೂಟನ್ ಚಿತ್ರಕ್ಕೆ ಇದೀಗ ಪ್ರಶಸ್ತಿಗಳ ಮಹಾಪೂರ..!!

19 Jan 2018 10:53 AM | Entertainment
353 Report

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ ವಿಭಾಗದಲ್ಲಿ ನ್ಯೂಟನ್ ಗೆ ಪ್ರಶಸ್ತಿ ಲಭಿಸಿದ್ದು, ಆಸ್ಕರ್ ನಲ್ಲಿ ನಿರಾಸೆ ಕಂಡಿದ್ದ ಚಿತ್ರಕ್ಕೆ ಇದೀಗ ಪ್ರಶಸ್ತಿಗಳ ಮಹಾಪೂರವೇ ಹರಿದುಬಂದಿದೆ. ಇನ್ನು ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ನಟ ಪಂಕಜ್ ತ್ರಿಪಾಠಿ ಪ್ರಶಸ್ತಿಗಳಿಸಿದ್ದಾರೆ.

2018ನೇ ಸಾಲಿನ ಫಿಲಂಫೇರ್ ಪ್ರಶಸ್ತಿ ಪ್ರಕಟವಾಗಿದ್ದು, ಈ ಹಿಂದೆ ಆಸ್ಕರ್ ರೇಸ್ ನಲ್ಲಿದ್ದ ಏಕೈಕ ಭಾರತೀಯ ಸಿನಿಮಾ ಎಂಬ ಹಿರಿಮೆ ಪಡೆದಿದ್ದ ರಾಜ್ ಕುಮಾರ್ ರಾವ್ ಅವರ ನ್ಯೂಟನ್ ಚಿತ್ರ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆದಿದೆ. ಇನ್ನು ಅತ್ಯುತ್ತಮ ನಾಯಕನಟ ವಿಭಾಗದಲ್ಲಿ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಕಹಾನಿ ಚಿತ್ರಕ್ಕಾಗಿ ನಟ ಅಕ್ಷಯ್ ಕುಮಾರ್, ಸಾವ್ ಧಾನ್ ಚಿತ್ರಕ್ಕಾಗಿ ಆಯುಷ್ಮಾನ್ ಖುರಾನಾ, ಕಾಬಿಲ್ ಚಿತ್ರಕ್ಕಾಗಿ ಹೃತಿಕ್ ರೋಷನ್, ಹಿಂದಿ ಮೀಡಿಯಂ ಚಿತ್ರಕ್ಕಾಗಿ ಇರ್ಫಾನ್ ಖಾನ್, ರಾಯೀಸ್ ಚಿತ್ರಕ್ಕಾಗಿ ಶಾರುಖ್ ಖಾನ್, ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರಕ್ಕಾಗಿ ವರುಣ್ ಧವನ್ ನಲ್ಲಿದ್ದಾರೆ. ಇದೇ ಜನವರಿ 20 ಅಂದರೆ ನಾಳೆ ಮುಂಬೈನಲ್ಲಿ ವಿದ್ಯುಕ್ತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ನಾಳೆ ಅಂತಿಮ ಹೆಸರುಗಳು ಅಧಿಕೃತವಾಗಿ ಘೋಷಣೆಯಾಗಲಿವೆ.

Edited By

Shruthi G

Reported By

Madhu shree

Comments