ಹಿರಿಯ ನಟ ಕಾಶಿನಾಥ್ ಅಗಲಿಕೆಗೆ ಕಂಬನಿ ಮಿಡಿದ ಎಚ್.ಡಿ. ದೇವೇಗೌಡರು

18 Jan 2018 12:30 PM | Entertainment
641 Report

ಬೆಂಗಳೂರು: ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಶಿನಾಥ್ ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿದ್ದರು. ಅವರ ಅಮೋಘ ನಟನೆಯಿಂದ ಕನ್ನಡ ಚಿತ್ರರಂಗವನ್ನು ರಂಜಿಸಿದ್ದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಇಂದು ಬರಿದಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ದೇವರು ಕಾಶಿನಾಥ್‌ ಆತ್ಮಕ್ಕೆ ಶಾಂತಿ ನೀಡಲಿ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವೇಗೌಡರು ಪ್ರಾರ್ಥಿಸಿದ್ದಾರೆ. 

Edited By

Shruthi G

Reported By

Shruthi G

Comments

Cancel
Done