ಖಡಕ್ ಮಿಲಿಟರಿ ಆಫೀಸರ್ ಲುಕ್ ನಲ್ಲಿ ಸ್ಟೈಲಿಸ್ ಸ್ಟಾರ್

05 Jan 2018 1:12 PM | Entertainment
278 Report

ಹೌದು, ಅಲ್ಲು ಅರ್ಜುನ ಅವರ ಹೊಸ ಸಿನಿಮಾವಾದ ನಾ ಪೇರು ಸೂರ್ಯದಲ್ಲಿ ಮಿಲಿಟರಿ ಆಫೀಸರ್ ಆಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಅಭಿಮಾನಿಗಳಿಗೆ ಹೊಸ ಲುಕ್ ಸಖತ್ ಇಷ್ಟವಾಗಿರುತ್ತದೆ. ಈ ಹಿಂದಿನ ಸಿನಿಮಾಗಳಂತೆ ಈ ಸಿನಿಮಾದಲ್ಲಿ ಸಹ ವಿಭಿನ್ನತೆಯನ್ನು ಹೊಂದಿದೆ. ಒಟ್ಟಿನಲ್ಲಿ ಅಲ್ಲು ಅರ್ಜುನ ಅವರ ನಾ ಪೇರು ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

ಟಾಲಿವುಡ್ ನ ಸ್ಟೈಲಿಸ್ ಸ್ಟಾರ್ ಅಲ್ಲು ಅರ್ಜುನ ಅವರು ಈಗ ಖಡಕ್ ಮಿಲಿಟರಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ ಅವರು ತಮ್ಮ ಮುಂದಿನ ಸಿನಿಮಾವಾದ ನಾ ಪೇರು ಸೂರ್ಯ ದಲ್ಲಿ ಮಿಲಿಟರಿ ಅಧಿಕಾರಿಯಾಗಿದ್ದಾರೆ. ಈಗ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟು ಹಾಕಿರುವುದಂತೂ ನಿಜ. ಅಲ್ಲು ಅರ್ಜುನ ಅವರು ಈ ಸಿನಿಮಾಗಾಗಿ ಸಖತ್ ವರ್ಕೌಟ್ ಮಾಡಿದ್ದಾರೆ. ಅಲ್ಲದೆ ವಿದೇಶದಲ್ಲಿ ತರಬೇತಿಯನ್ನು ಕೂಡ ಪಡೆದಿರುತ್ತಾರೆ. 

Edited By

Shruthi G

Reported By

Madhu shree

Comments