ಯಶ್-ರಾಧಿಕಾ ಜೋಡಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ

09 Dec 2017 3:14 PM | Entertainment
477 Report

ಸ್ಯಾಂಡಲ್​ವುಡ್​ನ ಸ್ಟಾರ್​ ಜೋಡಿಯಾದ ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್ ಅವರು ಮದುವೆಯಾಗಿ ಇಂದಿಗೆ ಒಂದು ವರ್ಷ ತುಂಬಿದ್ದು, ಮೊದಲ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ತಾರಾ ದಂಪತಿಗೆ ಅಭಿಮಾನಿಗಳಿಂದ ಹಾಗೂ ಚಂದನವನದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಮಧ್ಯೆ ರಾಧಿಕಾ ಪಂಡಿತ್​ ಅವರು ಅಭಿಮಾನಿಗಳಿಗೆ ವಾರ್ಷಿಕೋತ್ಸವ ಉಡುಗೊರೆಯಾಗಿ ಮದುವೆ ಸಂದರ್ಭದ ಪೂರ್ವ ತಯಾರಿ ಹಾಗೂ ಮದುವೆ ದಿನದ ಸಂತಸ ಕ್ಷಣಗಳುಳ್ಳ ಕೆಲವು ರೋಮಾಂಚಕ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

Edited By

Shruthi G

Reported By

Madhu shree

Comments