ಐದನೇ ಬಾರಿಗೆ ಏಷ್ಯಾದ ಸೆಕ್ಸಿ ಮಹಿಳೆ ಪಟ್ಟ ಗಿಟ್ಟಿಸಿಕೊಂಡ ನಟಿ ಯಾರು ಗೊತ್ತಾ ?

08 Dec 2017 10:52 AM | Entertainment
444 Report

ಬಾಲಿವುಡ್‌ ನಟಿ 'ಪ್ರಿಯಾಂಕಾ ಚೋಪ್ರಾ' ಐದನೇ ಬಾರಿಗೆ "ಏಷ್ಯಾದ ಸೆಕ್ಸಿ ಮಹಿಳೆ" ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ‌ ನಿಯತಕಾಲಿಕೆ 'ಈಸ್ಟರ್ನ್ ಐ' ಈ ಸಮೀಕ್ಷೆಯನ್ನು ನಡೆಸಿತ್ತು. ಹಾಲಿವುಡ್‌ನ‌ಲ್ಲಿ ಟಿವಿ ಶೋ ಕ್ವಾಂಟಿಕೋ ಮತ್ತು ಸಿನಿಮಾ ಬೇವಾಚ್‌ನಿಂದಾಗಿ ಪ್ರಿಯಾಂಕಾ ಜನರ ಮನಸೂರೆಗೊಂಡಿದ್ದಾಳೆ ಎಂದು ವಿವರಿಸಲಾಗಿದೆ.

ಕಳೆದ ವರ್ಷ ಇದೇ ಸಮೀಕ್ಷೆಯಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಈ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ಬಾರಿ ದೀಪಿಕಾ ಮೂರನೇ ಸ್ಥಾನದಲ್ಲಿದ್ದಾರೆ. ನಟಿ ನಿಯಾ ಶರ್ಮಾ ಎರಡನೇ ಸ್ಥಾನಕ್ಕೇರಿದ್ದಾರೆ. ಉಳಿದಂತೆ ಆಲಿಯಾ ಭಟ್‌, ಮಹಿರಾ ಖಾನ್‌, ದೃಷ್ಟಿ ಧಮಿ ಕೂಡ "ಮಾದಕ ಮಹಿಳೆಯರು' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Edited By

Hema Latha

Reported By

Madhu shree

Comments