' ಚಮಕ್' ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ತೆಲುಗಿನ ನಟ 'ವಿಜಯ್' ಅತಿಥಿಯಾಗಿ ಆಗಮನ

04 Dec 2017 12:36 PM | Entertainment
277 Report

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಆಡಿಯೋ ಬಿಡುಗಡೆ ಕಾರ್ಯಕ್ರಮ ಇಂದು ಅದ್ಧೂರಿಯಾಗಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ತೆಲುಗಿನ ನಟ 'ವಿಜಯ್ ದೇವರಕೊಂಡ' ಅತಿಥಿಯಾಗಿ ಆಗಮಿಸುತ್ತಿದ್ದಾರೆ.ಇತ್ತೀಚೆಗಷ್ಟೇ ತೆಲುಗಿನಲ್ಲಿ ಬಿಡುಗಡೆಯಾಗಿದ್ದ 'ಅರ್ಜುನ್ ರೆಡ್ಡಿ' ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ 'ವಿಜಯ್ ದೇವರಕೊಂಡ' ಇದೀಗ 'ಚಮಕ್' ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸುತ್ತಿದ್ದಾರೆ.

ಉಳಿದಂತೆ 'ಪದ್ಮಶ್ರೀ' ಪುರಸ್ಕೃತೆ ಜನಪದ ಹಾಡುಗಾರ್ತಿ 'ಸುಕ್ರಿ ಬೊಮ್ಮಗೌಡ' ಅವರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. 'ಚಮಕ್' ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸುತ್ತಿದ್ದು ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಹಾಗೂ ಗಣೇಶ್ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ಚಿತ್ರವನ್ನು ಚಂದ್ರಶೇಖರ್ ನಿರ್ಮಿಸಿದ್ದು ಚಿತ್ರ ಡಿಸೆಂಬರ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುವ ಸಾಧ್ಯತೆ ಇದೆ.

Edited By

Hema Latha

Reported By

Madhu shree

Comments