ಹಿರಿಯ ನಟ ಶಿವರಾಂ ಇನ್ನಿಲ್ಲ ಎಂಬ ಸುಳ್ಳು ವದಂತಿಗೆ ಸ್ಪಷ್ಟನೆ ನೀಡಿದ ನಟ ಶಿವರಾಂ

01 Dec 2017 2:51 PM | Entertainment
600 Report

ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಗಾಸಿಪ್ ಸುದ್ದಿಗಳಿಗೆ ಬರವಿಲ್ಲ. ನಟ ಶಿವರಾಂ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಿದಾಡುತ್ತಿದೆ. ಶಬರಿಮಲೆಗೆ ತೆರಳಿದ್ದಾಗ ಶಿವರಾಂ ಮೃತಪಟ್ಟಿದ್ದಾರೆಂಬ ಗಾಳಿಸುದ್ದಿ ಹರಿದಾಡುತ್ತಿದ್ದು, ಆದರೆ ಇದು ಕೇವಲ ವದಂತಿಯಾಗಿದೆ.

ಈ ಬಗ್ಗೆ ನಟ ಶಿವರಾಂ ಅವರೆ ಸ್ಪಷ್ಟನೆ ನೀಡಿದ್ದಾರೆ. ಭಗವಂತನ ದಯೆಯಿಂದ ಆರೋಗ್ಯವಾಗಿದ್ದೇನೆ.ಇನ್ನೂ ಕೆಲವು ವರ್ಷ ದೇವರ ಸೇವೆ ಮಾಡುವ ಅವಕಾಶ ಕೊಡಲಿ. ನಾನು ಈಗ ಚೆನ್ನೈನಲ್ಲಿ ಅಯ್ಯಪ್ಪ ಪೂಜೆಯಲ್ಲಿ ಇದ್ದೇನೆ. ಚೆನ್ನೈನಿಂದ ನಾಳೆ ಬೆಂಗಳೂರಿಗೆ ಬರಲಿದ್ದೇನೆ. ಶಬರಿ ಮಲೆಯಲ್ಲಿ ಯಾವುದೇ ಪ್ರವಾಹ ಬಂದಿಲ್ಲ. ನೀರಿಗೆ ವಿಷ ಬೆರೆಸಿದ್ದಾರೆ ಅನ್ನೋ ಸುಳ್ಳು ಸುದ್ದಿ ಹರಡುತ್ತಿದೆ.ಇಂಥ ಸುದ್ದಿಗಳನ್ನು ನಂಬಬೇಡಿ' ಎಂದು ಹಿರಿಯ ನಟ ಶಿವರಾಂ ತಿಳಿಸಿದ್ದಾರೆ.ಶಬರಿಮಲೆ ದೇವಸ್ಥಾನ ಮುಚ್ಚಲಾಗಿದೆ ಅನ್ನೋ ಸುದ್ದಿ ಹರಡಿದೆ. ಶಬರಿಮಲೆ ದೇವಸ್ಥಾನ ಮುಚ್ಚಿಲ್ಲ, ಮುಚ್ಚುವುದಿಲ್ಲ.ತಾಂತ್ರಿಕ ಕಾರಣದಿಂದ ಪಂದಳ ದೇವಸ್ಥಾನ ಮಾತ್ರ 3 ದಿನ ಮುಚ್ಚಲಾಗಿದೆ. ಅಲ್ಲಿ ಶಬರಿಮಲೆಯಲ್ಲಿ ಮಂಡಳ ಪೂಜೆ ನಡೆಯುತ್ತಿದೆ. ಡಿಸೆಂಬರ್​​ 26ರವರೆಗೆ ದೇಗುಲ ತೆರೆದೇ ಇರುತ್ತದೆ. ಅಯ್ಯಪ್ಪ ಭಕ್ತರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Edited By

Shruthi G

Reported By

Shruthi G

Comments

Cancel
Done