ಸಾಹಿತ್ಯ ಸಮ್ಮೇಳನದಲ್ಲಿ ಸಿನಿಮಾರಂಗ ಯಾಕಿಲ್ಲವೆಂದು ಯೋಗರಾಜ್ ಭಟ್ ವಿಶ್ಲೇಷಣೆ

24 Nov 2017 12:46 PM | Entertainment
400 Report

ಸಿನಿಮಾದವರಿಗೆ ಸಾಹಿತಿಗಳು ಮತ್ತು ಸಾಹಿತ್ಯ ಕೃತಿಗಳು ಸುಲಭಕ್ಕೆ ತಲೆಗೆ ಹೋಗಲ್ಲ... ಸಾಹಿತಿಗಳಿಗೆ ಸಿನಿಮಾದವರ ಪಾಪ್ಯುಲಾರಿಟಿ ಮತ್ತು ಸಿನಿಮಾ ಕತೆ- ಕಾವ್ಯಗಳು ಸುಲಭಕ್ಕೆ ಇಷ್ಟ ಆಗುವುದಿಲ್ಲ ಎಂದು ಯೋಗರಾಜ್ ಭಟ್ ವಿಶ್ಲೇಷಣೆ ಮಾಡಿದ್ದಾರೆ.

ಯಾವುದೇ ಜ್ಞಾನ ಮತ್ತು ಯಾವುದೇ ಅಜ್ಞಾನದ ಮಧ್ಯೆ ಎರಡನ್ನೂ ಬೆಸೆಯುವ ವಿಜ್ಞಾನದ ಒಂದು ಹಗ್ಗದ ಸೇತುವೆಯನ್ನು ಯಾರಾದರೂ ಒಂದಿಷ್ಟು ಮಂದಿ ಕಟ್ಟಬೇಕು. ಕಟ್ಟಲು  ಎರಡೂ ದಂಡೆಗಳನ್ನು ಇಷ್ಟಪಡುವ ವಿಜ್ಞಾನಿಗಳು ಬೇಕು. ಅವರದೊಂದಿಷ್ಟು  ಹಗ್ಗ ಇವರದೊಂದಿಷ್ಟು ಹಗ್ಗ ಆಚೀಚೆ ಎಸೆದು ಎದುರೆದುರೇ ಎಳೆದು ಕಟ್ಟಿದಲ್ಲಿ ಸೇತುವೆ ಎದ್ದೀತು. ಆದರೆ ಈ ಸೇತುವೆ ಬೇಕಾಗೇ ಇಲ್ಲ ಎಂಬ ಮನೋಭಾವ ಸಾಕಷ್ಟು ಜನರಲ್ಲಿ ಮೊದಲಿನಿಂದ ಇದ್ದಂತಿದೆ. ಆದ್ದರಿಂದ ಪರಸ್ಪರ ಹಗ್ಗ ಎಸೀತಾರೋ  ಬಿಡ್ತಾರೋ , ಸೇತುವೆ ಆಗ್ತದೋ ಬಿಡ್ತದೋ ಯಾರಿಗೂ ಗೊತ್ತಿಲ್ಲ. ಇಂಥ ಒಂದು ಸುಸಂದರ್ಭದಲ್ಲಿ  ಅತ್ಯಂತ ವರ್ಕೌ ಔಟ್ ಆಗುವ ಅಸಂಬದ್ಧ ಎನ್ನಿಸಿದಷ್ಟೂ ಸುಸಂಬದ್ಧವಾಗಿಯೇ ಕಾಣಬಹುದಾದ ಉಚಿತ ಸಲಹೆಯೊಂದನ್ನು ನೀಡಬಹುದು ಎಂದರು.

Edited By

Hema Latha

Reported By

Madhu shree

Comments