ಡಿಸೆಂಬರ್ 1 ರಂದು ಇಂಗ್ಲೆಂಡ್ ನಲ್ಲಿ ಪದ್ಮಾವತಿ ಸಿನಿಮಾ ರಿಲೀಸ್

23 Nov 2017 11:50 AM | Entertainment
312 Report

ನಿರ್ದೇಶಕ ಸಂಜಯ್ಲೀಲಾ ಬನ್ಸಾಲಿ ಮತ್ತು ಚಿತ್ರತಂಡಕ್ಕೆ ರಿಲೀಫ್ ಎಂಬಂತೆ ಚಿತ್ರವನ್ನು ಇಂಗ್ಲೆಂಡ್ನಲ್ಲಿ ಬಿಡುಗಡೆಗೊಳಿಸಲು ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಷನ್ ಅನುಮತಿ ನೀಡಿದೆ. ವಿವಿಧ ಸಂಘಟನೆಗಳಿಂದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಪದ್ಮಾವತಿ ಚಿತ್ರ ನಿಗದಿಯಂತೆ ಡಿಸೆಂಬರ್ 1 ರಂದು ಇಂಗ್ಲೆಂಡ್ ನಲ್ಲಿ ಬಿಡುಗಡೆಯಾಗಲಿದೆ.

ಡಿ.1ರಂದು ಬಿಡುಗಡೆಯಾಗಬೇಕಿದ್ದ ಪದ್ಮಾವತಿ ಚಿತ್ರಕ್ಕೆ ಸಿಬಿಎಫ್ಸಿ ಇದುವರೆಗೆ ಸೆನ್ಸಾರ್ ಸರ್ಟಿಫಿಕೇಟ್ ನೀಡಿಲ್ಲ. ಸೆನ್ಸಾರ್ ಮಂಡಳಿ ಸದಸ್ಯರು ಈ ಚಿತ್ರವನ್ನು ವೀಕ್ಷಿಸಿಲ್ಲ. ಸರ್ಟಿಫಿಕೇಟ್ ದೊರೆತರೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ರಜಪೂತ್ ಕರ್ಣಿ ಸೇನೆ ಘೋಷಿಸಿದೆ. 

Edited By

Hema Latha

Reported By

Madhu shree

Comments