ಶೂಟಿಂಗ್ ವೇಳೆ ಗಾಯಗೊಂಡ ನಟಿ ರಾಗಿಣಿ ಆಸ್ಪತ್ರೆಗೆ ದಾಖಲು

20 Nov 2017 3:40 PM | Entertainment
270 Report

ಮಿನರ್ವ ಮಿಲ್​ನಲ್ಲಿ ಸಿನಿಮಾದ ಫೈಟ್​ ಸೀನ್​ ಚಿತ್ರೀಕರಣ ಮಾಡಲಾಗುತ್ತಿತ್ತು. ಆಗ ಅಚಾನಕ್ಕಾಗಿ ಫೈಟರ್​ ಒಬ್ಬರು, ರಾಗಿಣಿ ಕಿವಿಗೆ ಮುಷ್ಠಿಯಿಂದ ಗುದ್ದಿದ್ದರಿಂದ ಗಾಯವಾಗಿದೆ. ಗಾಯಗೊಂಡ ರಾಗಿಣಿಯವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಮುಸ್ಸಂಜೆ ಮಹೇಶ್​ ನಿರ್ದೇಶನದ ಎಂಎಂಸಿಎಚ್​ ಚಿತ್ರದ ಶೂಟಿಂಗ್​ ವೇಳೆ ನಟಿ ರಾಗಿಣಿ ಗಾಯಗೊಂಡಿದ್ದಾರೆ. ವೈದ್ಯರು ಎರಡು ದಿನಗಳ ರೆಸ್ಟ್​ ಪಡೆಯಲು ತಿಳಿಸಿದ್ದು, ಸದ್ಯ ಚಿತ್ರೀಕರಣ ಪ್ಯಾಕಪ್​ ಮಾಡಲಾಗಿದೆ.

Edited By

Hema Latha

Reported By

Madhu shree

Comments