ಪದ್ಮಾವತಿ ಚಿತ್ರದ ಬೆಂಬಲಕ್ಕೆ ನಿಂತ ಪ್ರಕಾಶ್ ರೈ

17 Nov 2017 5:25 PM | Entertainment
500 Report

'ಒಬ್ಬರು ಮೂಗು ಕತ್ತರಿಸಬೇಕೆನ್ನುತ್ತೀರಿ, ಮತ್ತೊಬ್ಬರು ನಟನ ತಲೆ ಕಡಿಯಬೇಕು ಎನ್ನುತ್ತೀರಿ, ಇನ್ನೊಬ್ಬರು ನಟರೊಬ್ಬರನ್ನು ಗುಂಡಿಕ್ಕಬೇಕೆನ್ನುತ್ತೀರಿ. ಇಷ್ಟಾದರೂ ನಾವು 'ಅಸಹಿಷ್ಣುತೆ'ಯ ಕೃತ್ಯ ಇಲ್ಲ ಎಂಬುದನ್ನ ನಂಬಬೇಕೆಂದು ನೀವು ಬಯಸಿದ್ದೀರಿ. ಧ್ವನಿಗಳನ್ನ ಅಡಗಿಸುವ ಕಾರ್ಯ ನಡೆಯುತ್ತಿದೆ, ಭಯಭೀತಗೊಳಿಸಲಾಗುತ್ತಿದೆ'' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ .

ತೀರ್ಪುಗಾರರಿಂದ ಆಯ್ಕೆಯಾದ ಕೆಲ ಚಲನಚಿತ್ರಗಳನ್ನು ಚಿತ್ರೋತ್ಸವದಿಂದ ಕೈಬಿಡಬೇಕೆಂದು ವ್ಯವಸ್ಥೆ ಬಯಸಿದೆ. ಪದ್ಮಾವತಿ' ಸಿನಿಮಾ ವಿವಾದ, ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ 'ರಜಪೂತ ಕರಣಿ ಸೇನಾ', ಚಿತ್ರದ ನಾಯಕಿ ದೀಪಿಕಾಳ ಮೂಗನ್ನ ಕತ್ತರಿಸಬೇಕೆಂದಿತು. ಅಷ್ಟೇ ಅಲ್ಲದೆ ನಿರ್ದೇಶಕ ಬನ್ಸಾಲಿಯ ತಲೆ ಕತ್ತರಿಸಿದರೆ '5 ಕೋಟಿ' ಬಹುಮಾನ ನೀಡುವುದಾಗಿ 'ಮೀರತ್ ನ ಕ್ಷತ್ರಿಯ ಸಮುದಾಯ' ಬೆದರಿಕೆ ಹಾಕಿದೆ. ಇದನ್ನೆಲ್ಲವನ್ನೂ ತಿಳಿದ ಪ್ರಕಾಶ್ ರೈ ಟ್ವೀಟ್ ಮಾಡುವ ಮೂಲಕ ತಮ್ಮ ಬೆಂಬಲ 'ಪದ್ಮಾವತಿ' ಸಿನಿಮಾಗೆ ಸೂಚಿಸಿದ್ದಾರೆ. ಇದೇ ಸಮಯದಲ್ಲಿ ಚಿತ್ರೋತ್ಸವಕ್ಕೆ ಆಯ್ಕೆಯಾದ ರವಿ ಜಾದವ್ ಅವರ ಮರಾಠಿ ಸಿನಿಮಾ 'ನ್ಯೂಡ್' ಮತ್ತು ಸನಲ್ ಕುಮಾರ್ ನಿರ್ದೇಶನದ 'ಎಸ್.ದರ್ಗಾ' ಎರಡನ್ನೂ 48ನೇ 'ಅಂತರಾಷ್ಟ್ರೀಯ ಚಲನಚಿತ್ರೋತ್ಸವ'ದಿಂದ 'ವಾರ್ತಾ ಮತ್ತು ಸಚಿವಾಲಯ' ಕೈ ಬಿಟ್ಟಿದೆ ಇದರಿಂದ ನಟ ಪ್ರಕಾಶ್ ರೈ ಕೋಪಗೊಂಡಿದ್ದಾರೆ.

Edited By

Shruthi G

Reported By

Madhu shree

Comments