ರಿಲೀಸ್ ಗೆ ರೆಡಿಯಾಗಿದೆ ಚಮಕ್ ಸಿನಿಮಾ

17 Nov 2017 12:27 PM | Entertainment
234 Report

ಹೌದು, ಚಮಕ್ ಸಿನಿಮಾ ಡಿಸೆಂಬರ್ ತಿಂಗಳ 29 ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಹನ್ನೊಂದು ವರ್ಷಗಳ ಹಿಂದೆ ಮುಂಗಾರು ಮಳೆ ಸಿನಿಮಾ ಡಿಸೆಂಬರ್ 29ರಂದು ಬಿಡುಗಡೆ ಕಂಡಿತ್ತು. ಈಗ ಅದೇ ದಿನ ಚಮಕ್ ಸಿನಿಮಾ ರಿಲೀಸ್ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಚಮಕ್ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜೋಡಿಯಾಗಿ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಚಮಕ್ ಸಿನಿಮಾ ಸುನಿ ನಿರ್ದೇಶಿಸಿದ್ದಾರೆ. ಒಟ್ಟಿನಲ್ಲಿ ಚಮಕ್ ಸಿನಿಮಾ ಮುಂದಿನ ತಿಂಗಳು ತೆರೆ ಕಾಣುತ್ತದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.

Edited By

Shruthi G

Reported By

Madhu shree

Comments