'ಬಿಗ್ ಬಾಸ್' ಮನೆಯಲ್ಲಿ ಇಲಿಗಳು ಇದ್ಯಾ.?

13 Nov 2017 11:36 AM | Entertainment
423 Report

ಇದೇನಪ್ಪಾ... ಅಂತೀರಾ 'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಕಿರುವ ಹರಕಲು ಪ್ಯಾಂಟ್ ನ ನೋಡಿ ಟ್ರೋಲಿಗರು ''ಬಿಗ್ ಬಾಸ್ ಮನೆಯಲ್ಲಿ ಇಲಿಗಳ ಹಾವಳಿ'' ಅಂತ ಟ್ರೋಲ್ ಮಾಡುತ್ತಿದ್ದಾರೆ.

ಹಾಗ್ನೋಡಿದ್ರೆ, ಹರಕಲು ಪ್ಯಾಂಟ್ ಫ್ಯಾಶನ್ ನಿಜ. ಆದ್ರೆ, ಅನುಪಮಾ ಗೌಡ ಧರಿಸಿದ್ದ ಪ್ಯಾಂಟ್ ಜಾಸ್ತಿ ಹರಿದು ಹೋದಂತೆ ಕಂಡಿರುವುದರಿಂದ ಟ್ರೋಲಿಗರ ಗಮನ ಸೆಳೆದಿದೆ. ಅನುಪಮಾ ಪ್ಯಾಂಟ್ ನೋಡಿ 'ಬಿಗ್ ಬಾಸ್' ಮನೆಯಲ್ಲಿ ಇಲಿಗಳಿವೆ ಅಂತ ಟ್ರೋಲ್ ಆಗಿದೆ ಹೊರತು 'ದೊಡ್ಮನೆ'ಯಲ್ಲಿ ಇಲಿಗಳಿಲ್ಲ. ಒಟ್ನಲ್ಲಿ, 'ಬಿಗ್ ಬಾಸ್' ಕಾರ್ಯಕ್ರಮವನ್ನು ಎಲ್ಲರೂ ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಅನ್ನೋದಕ್ಕೆ ಇದೂ ಒಂದು ನಿದರ್ಶನ ಅಷ್ಟೆ.

Edited By

Hema Latha

Reported By

Madhu shree

Comments