ಬಿಗ್ ಬಾಸ್ ನಲ್ಲಿ ಮೂರು ಪ್ರೇಮ ಕಹಾನಿಗಳು ಹುಟ್ಟಿಕೊಂಡಿದೆ...!

10 Nov 2017 12:17 PM | Entertainment
488 Report

ಈ ಸಾರಿಯ ಬಿಗ್ ಬಾಸ್ ನಲ್ಲಿ ಜಗನ್ ಮತ್ತು ಜೆಕೆ ಮೇಲೆ ಎಲ್ಲ ಸ್ಪರ್ಧಿಗಳ ಕಣ್ಣು ಬಿದ್ದಿದೆ ಎಂದು ಹೇಳಬಹುದು. ಅನುಪಮಾ ಮತ್ತು ಜಗನ್ ಈ ಹಿಂದೆ ಪ್ರೇಮಿಗಳಾಗಿದ್ದವರು. ಈಗ ಮತ್ತೆ ಲವ್ ಕನೆಕ್ಷನ್ ಆಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಇನ್ನು ರ್ಯಾಂಪರ್ ಸಿಂಗರ್ ಚಂದನ್ ಶೆಟ್ಟಿ ಅವರು ಶ್ರುತಿ ಪ್ರಕಾಶ್ ಅವರನ್ನು ಕಂಡರೆ ಇಷ್ಟ ಎಂದು ಎಲ್ಲರ ಮುಂದೆ ಹೇಳಿಕೊಂಡಿದ್ದರು.

ಬಿಗ್ ಬಾಸ್' ಸೀಸನ್ 5ರಲ್ಲಿ ಸಹ ಲವ್ ಕಹಾನಿಗಳು ಹುಟ್ಟಿಕೊಳ್ಳುತ್ತಿವೆ. ಈ ಹಿಂದಿನ ಬಿಗ್ ಬಾಸ್ ಆವೃತ್ತಿಗಳಂತೆ ಈ ಸೀಸನ್ ನಲ್ಲಿಯೂ ಸಹ ಸ್ಪರ್ಧಿಗಳಲ್ಲಿ ಪ್ರೇಮ ಅಂಕುರವಾಗುತ್ತಿವೆ. ಈ ಬಾರಿ ಮೂರು ಪ್ರೇಮಕಹಾನಿಗಳು ಹುಟ್ಟಿಕೊಳ್ಳುತ್ತಿರುವುದು ವಿಶೇಷ. ಶ್ರುತಿ ಪ್ರಕಾಶ್ ಅವರು ಜಯರಾಮ ಕಾರ್ತಿಕ (ಜೆಕೆ) ಅವರನ್ನು ಇಷ್ಟಪಡುತ್ತಿದ್ದಾರೆ. ಈ ನಡುವೆ ಜಗನ್ ಮೇಲೆ ನಟಿ ಆಶಿತಾ ಕಣ್ಣು ಕೂಡ ಬಿದ್ದಿದೆ ಎನ್ನಬಹುದು. ಯಾಕೆಂದರೆ ಜಗನ್ ಪರವಾಗಿ ಅವರು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀಸನ್ ನಲ್ಲಿ ಲವ್ ಕಹಾನಿಗಳು ತುಂಬಾನೇ ರೊಮ್ಯಾಂಟಿಕ್ ಆಗಿದೆ ಎಂದು ಹೇಳಬಹುದು. ಯಾರ ಯಾರ ಲವ್ ಸಕ್ಸಸ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. 

Edited By

Hema Latha

Reported By

Madhu shree

Comments