ಸುದೀಪ್ ಮತ್ತು ಅಂಬಿ ಜುಗಲ್ ಬಂದಿಯ ಚಿತ್ರಕ್ಕೆ 26ರ ಯುವಕ ಆಕ್ಷನ್ ಕಟ್

09 Nov 2017 3:00 PM | Entertainment
242 Report

ಸುದೀಪ್ ಮತ್ತು ಅಂಬಿ ಜುಗಲ್ ಬಂದಿಯ ಚಿತ್ರಕ್ಕೆ ಯುವ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳಲಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಯಂಗ್ ಡೈರೆಕ್ಟರ್ ಕಾಲಿಡುತ್ತಿದ್ದಾರೆ. 26 ವರ್ಷದ ಗುರುದತ್ ಗಣಿಗ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಈಗ ಕಿಚ್ಚನ ಮನೆಯಿಂದ ಹೊರಬಿದ್ದಿದೆ.

ಸುದೀಪ್ ಮತ್ತು ಅಂಬಿ ಸಿನಿಮಾ ಅಂದ್ಮೇಲೆ ಸ್ಟಾರ್ ನಿರ್ದೇಶಕರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಈ ಎಲ್ಲ ನಿರೀಕ್ಷೆಗೂ ಮೀರಿ ಯುವ ನಿರ್ದೇಶಕ ಗುರು ಅವರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಲೆಜೆಂಡ್ ನಟರಿಗೆ ನಿರ್ದೇಶನ ಮಾಡುವ ಮೂಲ ತಮ್ಮ ಚೊಚ್ಚಲ ಸಿನಿಮಾ ಮಾಡುತ್ತಿದ್ದಾರೆ ಗುರು. 'ಅಂಬಿ ನಿಂಗ್ ವಯಸಾಯ್ತೋ' ಚಿತ್ರದಲ್ಲಿ ಅಂಬರೀಶ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದು, ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಬರುವ ಅಂಬರೀಶ್ ಪಾತ್ರವನ್ನ ಸುದೀಪ್ ನಿರ್ವಹಿಸಲಿದ್ದಾರೆ. ಅಂಬರೀಷ್ ಅವರಿಗೆ ನಾಯಕಿಯಾಗಿ ಸುಮಲತಾ ಅಂಬರೀಷ್ ಅಭಿನಯಿಸುತ್ತಿದ್ದಾರೆ. ಆದ್ರೆ, ಸುದೀಪ್ ಅವರಿಗೆ ನಾಯಕಿ ಯಾರಾಗ್ತಾರೆ ಎಂಬುದು ಕುತೂಹಲವಾಗಿದೆ. ಯಾಕಂದ್ರೆ, ಚಿತ್ರತಂಡ ಕಿಚ್ಚನ ನಾಯಕಿಗಾಗಿ ಹುಡುಕುತ್ತಿದೆ. ಸದ್ಯ, ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಿರುವ ಚಿತ್ರತಂಡ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ನಲ್ಲಿ ಶೂಟಿಂಗ್ ಶುರು ಮಾಡುವ ತಯಾರಿಯಲ್ಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದು, ಉಳಿದ ತಾಂತ್ರಿಕ ತಂಡವನ್ನ ಸದ್ಯದಲ್ಲೇ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

Edited By

Hema Latha

Reported By

Madhu shree

Comments