ಹಿಂದೂ ಸಂಘಟನೆಯ ನಾಯಕರ ಹತ್ಯೆ ಹಿಂದೆ ಐಎಸ್ ಐ(ISI) ಕೈವಾಡ

07 Nov 2017 9:53 PM | Entertainment
266 Report

ಪಂಜಾಬ್ : ಪಂಜಾಬ್ ನಲ್ಲಿ ಹಿಂದೂ ಸಂಘಟನೆ ನಾಯಕರ ಹತ್ಯೆ ಕುರಿತಂತೆ ಮಾಹಿತಿ ಹೊರಬಂದಿದೆ. ಮೂಲಗಳ ಪ್ರಕಾರ ಗುಜುರಾತ್ ನಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಯ ನಾಯಕರ ಹತ್ಯೆ ಹಿಂದೆ ಸ್ಥಳೀಯ ಗ್ಯಾಂಗ್ ಇರುವುದು ಪತ್ತೆಯಾಗಿದೆ.

ಪಂಜಾಬ್ : ಪಂಜಾಬ್ ನಲ್ಲಿ ಹಿಂದೂ ಸಂಘಟನೆ ನಾಯಕರ ಹತ್ಯೆ ಕುರಿತಂತೆ ಮಾಹಿತಿ ಹೊರಬಂದಿದೆ. ಮೂಲಗಳ ಪ್ರಕಾರ ಗುಜುರಾತ್ ನಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಯ ನಾಯಕರ ಹತ್ಯೆ ಹಿಂದೆ ಸ್ಥಳೀಯ ಗ್ಯಾಂಗ್ ಇರುವುದು ಪತ್ತೆಯಾಗಿದೆ. ಜೈಲಿನಲ್ಲಿ ಇದ್ದುಕೊಂಡೇ ಹತ್ಯೆಯನ್ನು ಹೆಣೆಯಲಾಗುತ್ತಿತ್ತು. ಇನ್ನು ಈ ಮಾಹಿತಿಯಿಂದ ತಿಳಿದು ಬಂದ ಆಘಾತಕಾರಿ ಅಂಶವೇನೆಂದರೆ ಈ ಗ್ಯಾಂಗ್ ಐಎಸ್ಐ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿತ್ತು ಎನ್ನಲಾಗಿದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ಈ ಬಗ್ಗೆ ತನಿಖೆ ನಡೆಸುತ್ತಿದೆ.

ಘಟನೆ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಸಹ ಪಂಜಾಬ್ ಪೊಲೀಸರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯೋಜನಾಬದ್ಧ ತನಿಖೆ ಬಳಿಕ ನಾಯಕರ ಹತ್ಯೆ ಹಿಂದೆ ಯಾರ ಕೈವಾಡವಿತ್ತು ಎಂಬುದರ ಬಗ್ಗೆ ಪೊಲೀಸರು ಪತ್ತೆ ಮಾಡಿರುವುದಲ್ಲದೇ ನಾಲ್ಕು ಜನರನ್ನು ಬಂಧಿಸಿದ್ದಾರೆ. ಈ ಬಗ್ಗೆ ಸಿಎಂ ಪ್ರಶಂಸಿಸಿದ್ದಾರೆ. ಇನ್ನು ಲೂಧಿಯಾನಾ, ಜಲಧರ್, ಖನ್ನಾ ಸ್ಥಳಗಳಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಅರೆಸ್ಟ್ ಮಾಡಲಾಗಿದೆ. ಪಂಜಾಬ್ ನಲ್ಲಿ ಈ ಹಿಂದೆ ಹಲವು ಹತ್ಯೆಗಳು ನಡೆದಿವೆ.

 

Edited By

Hema Latha

Reported By

Sudha Ujja

Comments