ಮಜಾ ಟಾಕೀಸ್'ಗೆ ಶುಭಂ ಬೋರ್ಡ್ ಹಾಕಿದ ಸೃಜನ್ ಲೋಕೇಶ್

09 Oct 2017 5:39 PM | Entertainment
517 Report

ನಗುವಿನ ಅಲೆ ಮೂಡಿಸುತ್ತಿದ್ದ ಮಜಾ ಟಾಕೀಸ್ ಗೆ ತೆರೆ ಎಳೆಯಲಾಗಿದೆ. ಸಿನಿಮಾ ತಂಡದ ಪ್ರಮೋಷನ್ ಗಳಿಗೂ ಕೂಡ 'ಮಜಾ ಟಾಕೀಸ್' ಒಳ್ಳೆಯ ವೇದಿಕೆ ಆಗಿತ್ತು. ದೊಡ್ಡ ಜನಮನ್ನಣೆ ಪಡೆದಿದ್ದ ಈ ಕಾರ್ಯಕ್ರಮಕ್ಕೆ ಈಗ ತೆರೆ ಎಳೆಯುವ ಸಮಯ ಬಂದಿದೆ.

ಮಜಾ ಟಾಕೀಸ್' ಹೆಸರು ಕೇಳಿದ ಹಾಗೆ ಒಂದು ನಗು ಮೂಡುತ್ತದೆ. ಸತತ ಎರಡುವರೆ ವರ್ಷ ಕಿರುತೆರೆಯ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದ ಈ ಕಾರ್ಯಕ್ರಮ ಈಗ ಕೊನೆಯ ಹಂತಕ್ಕೆ ಬಂದಿದೆ.
'ಕಲರ್ಸ್ ಕನ್ನಡ' ವಾಹಿನಿಯ ಯಶಸ್ವಿ ಕಾರ್ಯಕ್ರಮವಾಗಿದ್ದ 'ಮಜಾ ಟಾಕೀಸ್' ಈಗ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ. ಕನ್ನಡದ ಸ್ಟಾರ್ ನಟರಾದ ಶಿವಣ್ಣ, ಉಪೇಂದ್ರ, ದರ್ಶನ್, ಸುದೀಪ್, ಪುನೀತ್ ಸೇರಿದಂತೆ ಅನೇಕ ನಟರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಿನಿಮಾ ತಂಡದ ಪ್ರಮೋಷನ್ ಗಳಿಗೂ ಕೂಡ 'ಮಜಾ ಟಾಕೀಸ್' ಒಳ್ಳೆಯ ವೇದಿಕೆ ಆಗಿತ್ತು. ದೊಡ್ಡ ಜನಮನ್ನಣೆ ಪಡೆದಿದ್ದ ಈ ಕಾರ್ಯಕ್ರಮಕ್ಕೆ ಈಗ ತೆರೆ ಎಳೆಯುವ ಸಮಯ ಬಂದಿದೆ. ಕನ್ನಡ ಕಿರುತೆರೆಯ ಹೆಸರಾಂತ ಕಾರ್ಯಕ್ರಮ 'ಮಜಾ ಟಾಕೀಸ್'ಗೆ ಶುಭಂ ಬೋರ್ಡ್ ಸದ್ಯದಲ್ಲಿಯೇ ಬೀಳಲಿದೆ. ಇತ್ತೀಚಿಗೆ ಕಾರ್ಯಕ್ರಮದ ಕೊನೆಯ ಸಂಚಿಕೆಯ ಚಿತ್ರೀಕರಣ ನಡೆದಿದೆ.

Edited By

Suresh M

Reported By

Madhu shree

Comments