ಬಿಗ್ ಬಾಸ್ - 5 ಸೆಲೆಬ್ರಿಟಿ ಲಿಸ್ಟ್ ರೆಡಿ, ಯಾರೆಲ್ಲ ಇದ್ದಾರೆ ?

23 Sep 2017 12:59 PM | Entertainment
391 Report

ಪತ್ರಿಕೆಯೊಂದರ ವರದಿಯ ಮೇರೆಗೆ, ಈ ರಿಯಾಲಿಟಿ ಷೋನಲ್ಲಿ ಈ ಬಾರಿ ಸೆಲೆಬ್ರಿಟಿಗಳು ಮಾತ್ರವಲ್ಲದೇ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆಯಂತೆ. ಮೂಲಗಳ ಪ್ರಕಾರ ಇದೇ ಅಕ್ಟೋಬರ್ 8ರಂದು ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗಲಿದ್ದು, ಅಕ್ಟೋಬರ್ 9ರಿಂದ ಬಿಗ್ ಹೌಸ್ ನಲ್ಲಿ ಸ್ಪರ್ಧಿಗಳ 100 ದಿನಗಳ ಸಂಸಾರ ಶುರುವಾಗಲಿದೆ.

ನಟ ಕಿಚ್ಚಾ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಷೋಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಅಕ್ಟೋಬರ್ 8ರಿಂದ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಪತ್ರಿಕೆಯೊಂದು ವರದಿ ಮಾಡಿರುವಂತೆ ಈ ಬಾರಿ ಬಿಗ್ ಹೌಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇಷ್ಟಕಾಮ್ಯ ಚಿತ್ರದ ನಾಯಕಿ ಕಾವ್ಯಾಶೆಟ್ಟಿ, ನಟ ಕೋಮಲ್, ನಟಿ ತಾರಾ, ನಟ ಸುನಿಲ್ ರಾವ್, ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್, ನಟ ದಿಗಂತ್, ಹಾಸ್ಯ ನಟ ರಾಜು ತಾಳಿಕೋಟೆ, ಒಗ್ಗರಣೆ ಡಬ್ಬಿ ಕಾರ್ಯಕ್ರಮ ನಿರೂಪಕ ಮುರಳಿ ಸೇರಿದಂತೆ ಹಲವು ಗಣ್ಯರ ಹೆಸರುಗಳು ಕೇಳಿಬರುತ್ತಿವೆ. ಒಟ್ಟು 16 ಮಂದಿ ಸ್ಪರ್ಧಿಗಳ ಪೈಕಿ 7 ಅಥವಾ 8 ಮಂದಿ ಸ್ಪರ್ಧಿಗಳು ಸೆಲೆಬ್ರಿಟಿಗಳಾದರೆ. ಉಳಿದ 7 ಅಥವಾ 8 ಮಂದಿ ಜನಸಾಮಾನ್ಯರು ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿರಲಿದ್ದಾರೆ ಎಂದು ಹೇಳಲಾಗಿದೆ.

Edited By

venki swamy

Reported By

Madhu shree

Comments