ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಅಂತ ಕರೆಯಿರಿ : ಧ್ರುವ ಸರ್ಜಾ

22 Sep 2017 2:01 PM | Entertainment
348 Report

ಸತತ ಮೂರೂ ಸಿನಿಮಾಗಳಲ್ಲಿ ಹ್ಯಾಟ್ರಿಕ್ ಕಂಡ ನಟ ಧ್ರುವ ಸರ್ಜಾ ನನ್ನು ಅಭಿಮಾನಿಗಳು ಹ್ಯಾಟ್ರಿಕ್ ಹೀರೋ ಎಂದು ಕರೆಯಲು ಮುಂದಾಗಿದ್ದು, ಅದಕ್ಕೆ ಧ್ರುವ ಸರ್ಜಾ ತನ್ನನ್ನು ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಅಂತ ನಾಮಕರಣ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಅಭಿಮಾನಿಗಳು ಹಾಗೆ ಕರೆಯಬೇಕೆಂದು ಸೂಚಿಸಿದ್ದಾರೆ.

ಮೂರು ಸ್ವಮೇಕ್ ಸಿನಿಮಾಗಳಿಂದ ಧ್ರುವ ಸರ್ಜಾ ಯಶಸ್ಸು ಕಂಡಿದ್ದಾರೆ. ಭರ್ಜರಿ ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಹರಿಪ್ರಿಯಾ ನಟಿಸಿದ್ದಾರೆ. ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ರಾಜ್ಯಾದ್ಯಂತ ಭರ್ಜರಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಧ್ರುವ ಅವರ ಮುಂದಿನ ಸಿನಿಮಾದ ಹೆಸರು ಪೊಗರು, ಇದು ಅವರ ನಾಲ್ಕನೇ ಸಿನಿಮಾವಾಗಿದೆ. ಈ ಸಿನಿಮಾವನ್ನು ನಂದ ಕೀಶೋರ್ ನಿರ್ದೇಶನ ಮಾಡಲಿದ್ದಾರೆ.

Edited By

Hema Latha

Reported By

Madhu shree

Comments