ನಟಿ ಶ್ರದ್ಧಾ ಕಪೂರ್ ವಿರುದ್ಧ ಕ್ರಿಮಿನಲ್ ಕೇಸ್ ?

19 Sep 2017 10:52 PM | Entertainment
314 Report

ಮುಂಬೈ : ನಟಿ ಶ್ರದ್ಧಾ ಕಪೂರ್ ಅವರ ಹಿಂದೆದೂ ನೋಡಿರದ ಈ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮುಂಬರುವ ಚಿತ್ರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನೈಜ ಬಯೋಪಿಕ್ ಚಿತ್ರ ಹಸೀನಾ ಪಾರಕರ ಚಿತ್ರದಲ್ಲಿ ದಾವೂದ್ ಸಹೋದರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರದ ನಿರ್ಮಾಪಕ ಸೇರಿ ನಟಿ ಶ್ರದ್ಧಾ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಎಮ್ ಆ್ಯಂಡ್ ಎಮ್ ಬ್ರ್ಯಾಂಡ್ ಡಿಸೈನ್ ಕಂಪನಿಯಿಂದ ಕ್ರಿಮಿನಲ್ ಕೇಸ್ ದಾಖಲಾಗಿದೆ. ನಟಿ ಶ್ರಧ್ಧಾ ವಿರುದ್ಧ ಮೋಸ ಹಾಗೂ ಕ್ರಿಮಿನಲ್ ಉಲ್ಲಂಘನೆಯ ಆರೋಪ ಮಾಡಿರುವ ಕಂಪನಿ ಮುಂಬೈ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದಾರೆ. ನಟಿ ಶ್ರದ್ಧಾ ಜತೆಗಿನ ಒಪ್ಪಂದದ ಪ್ರಕಾರ ಚಿತ್ರದ ಪ್ರಚಾರ ಚಟುವಟಿಕೆಗಳ ಸಂದರ್ಭದಲ್ಲಿ ಶ್ರದ್ಧಾ ಇದಕ್ಕೆ ಸಂಬಂಧಪಟ್ಟಂತಹ ಬ್ರ್ಯಾಂಡ್ ಗಳನ್ನು ಪ್ರಚಾರ ಮಾಡಲಿಲ್ಲ ಎಂಬುದೇ M&M ಬ್ರ್ಯಾಂಡ್ ಡಿಸೈನರ್ ಕಂಪನಿಯ ಆರೋಪವಾಗಿದೆ

ಎಮ್ ಆ್ಯಂಡ್ ಎಮ್ ಕಂಪನಿ ಸಿನಿಮಾಗಾಗಿ ಶ್ರದ್ಧಾ ಕಪೂರ್ ಗೆ ಕಾಸ್ಟೂಮ್ಸ್ ಹಾಗೂ ಡ್ರೆಸ್ ಗಳನ್ನು ನೀಡಿತ್ತು. ಕಂಪನಿ ಜತೆಗಿನ ಒಪ್ಪಂದ ಪ್ರಕಾರ, ಸಿನಿಮಾ ಪ್ರಚಾರದ ವೇಳೆ ಶ್ರದ್ಧಾ ಕಪೂರ್ ಕಂಪನಿಯ ಬ್ರ್ಯಾಂಡ್ ಗಳನ್ನು ಪ್ರಚಾರ ಮಾಡಬೇಕು ಎಂದು ಹೇಳಲಾಗಿತ್ತು. ಆದ್ರೆ ಶ್ರದ್ಧಾ ಈ ವೇಳೆ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಹಾಗೆ ಶ್ರದ್ಧಾ ಅಭಿನಯದ 'ಹಸೀನಾ ಪಾರಕರ' ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನವೇ ನಟಿ ಶ್ರದ್ಧಾ ಕಪೂರ್ ಕೇಸ್ ಎದುರಿಸುವಂತಾಗಿದೆ.

Edited By

Shruthi G

Reported By

Sudha Ujja

Comments