ಅರ್ಜುನ್ ಸರ್ಜಾ ಸರ್ ಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ : ನಿರ್ದೇಶಕ ಚೇತನ್

13 Sep 2017 5:07 PM | Entertainment
274 Report

ಅರ್ಜುನ್ ಸರ್ಜಾ ಮತ್ತು ಧ್ರುವ ಸರ್ಜಾ ಅದಾಗಲೇ ಅದೆಷ್ಟೋ ಕಥೆಗಳನ್ನ ಕೇಳಿದ್ದರೂ ಸಹ ಯುವ ಪ್ರತಿಭೆ ಚೇತನ್ ರವರಿಗೆ ಅವಕಾಶ ನೀಡಿದ್ದರು . ಈ ಮುನ್ನ ಧ್ರುವ ಸರ್ಜಾ ಅಭಿನಯದ ಮೊದಲ ಸಿನಿಮಾ 'ಅದ್ಧೂರಿ' ಚಿತ್ರ ಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಚೇತನ್ ಕುಮಾರ್ ನಂತರ ಮೊದಲ ಬಾರಿಗೆ ಬಹದ್ದೂರ್' ಚಿತ್ರಕ್ಕೆ ಡೈರೆಕ್ಟರ್ ಆಗಿ ನಿರ್ದೇಶಿಸಲು ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಗ್ರೀನ್ ಸಿಗ್ನಲ್ ನೀಡಿದರು.

'ಭರ್ಜರಿ' ಚಿತ್ರದ ಪ್ರಮೋಷನ್ ನಿಮಿತ್ತ ನಾಯಕ ಧ್ರುವ ಸರ್ಜಾ, ನಾಯಕಿ ರಚಿತಾ ರಾಮ್ ಹಾಗೂ ನಿರ್ದೇಶನ ಚೇತನ್ ಕುಮಾರ್ 'ಒನ್ ಇಂಡಿಯಾ' ಕಛೇರಿಗೆ ಭೇಟಿ ನೀಡಿದ್ದರು.'ಒನ್‌ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ' ತಂಡಕ್ಕೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಅರ್ಜುನ್ ಸರ್ಜಾ ರವರಿಗೆ ಚೇತನ್ ಧನ್ಯವಾದ ಅರ್ಪಿಸಿದರು. ''100 ಡೇಸ್ ಕೊಟ್ಟ ನಾಯಕ ನಟ, ಹೊಸಬರ ಮೇಲೆ ನಂಬಿಕೆ ಇಟ್ಟು ಅವಕಾಶ ಕೊಡುವುದು ತುಂಬಾ ಅಪರೂಪ. ಅರ್ಜುನ್ ಸರ್ಜಾ ಸರ್ ಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ. 'ಬಹದ್ದೂರ್' ಸಿನಿಮಾ ಮಾಡಲು ಅವಕಾಶ ಕಲ್ಪಿಸಿಕೊಟ್ಟರು. ಈಗ 'ಭರ್ಜರಿ' ಸಿನಿಮಾ ಕೊಟ್ಟಿದ್ದಾರೆ. ನಂಬಿಕೆ ಉಳಿಸಿಕೊಂಡಿದ್ದೇನೆ ಎಂದು ಭಾವಿಸುತ್ತೇನೆ. ಭರ್ಜರಿ ಸಿನಿಮಾ ನಿಜವಾಗಲೂ ಭರ್ಜರಿ ಆಗಿದೆ'' ಎಂದರು ನಿರ್ದೇಶಕ ಚೇತನ್.

Courtesy: Dailyhunt

Comments