ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಮೂವರ ಸಾವು,

09 Sep 2017 9:43 AM | Entertainment
317 Report

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಸುರಿದ ಭಾರೀ ಮಳೆಗೆ ಮೂವರು ಮೃತಪಟ್ಟಿರುವ ವರದಿಯಿಂದ ತಿಳಿದು ಬಂದಿದೆ. ಒಬ್ಬ ಕೊಚ್ಚಿಕೊಂಡು ಹೋಗಿರೋ ಅನುಮಾನ ವ್ಯಕ್ತವಾಗಿದೆ. ಡ್ರೈನೇಜ್ ನ ಸ್ಲ್ಯಾಬ್ ಬಿದ್ದ ಪರಿಣಾಮ ವಯ್ಯಾಲಿ ಕಾವಲ್ ನಿವಾಸಿ ವರುಣ್ (18) ಕೊಚ್ಚಿಕೊಂಡು ಹೋಗಿರೋ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಮೇಯರ್ ಜಿ.ಪದ್ಮಾವತಿ ಭೇಟಿ ನೀಡಿದ್ದಾರೆ. ನಗರಾದಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮರಗಳು ಧರೆಗುರುಳಿದ್ದು, ಅಂಡರ್ ಪಾಸ್ ರಸ್ತೆಗಳಲ್ಲಿ ನಾಲ್ಕೈದುಅಡಿಗಳವರೆಗೂ ನೀರು ತುಂಬಿದೆ.

ಸುಮಾರು 1 ಗಂಟೆಯವರೆಗೂ ಸುರಿದ ಮಳೆಯಿಂದಾಗಿ ಹಲವಡೆ ಜಲಾವೃತವಾಗಿದ್ದು, ಬಸವನಗುಡಿ, ಹನುಮಂತನಗರ , ಜೆಸಿರಸ್ತೆ , ಅಜಾದ್ ನಗರ, ಸೇರಿ ಹಲವಡೆ ಮರಗಳು ಜಲಾವೃತವಾಗಿ ನದಿಯಂತಾಗಿವೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಮನೆ ತಲುಪಲು ಹರಸಾಹಸ ಪಡುತ್ತಿದ್ದಾರೆ. ಕಳೆದ 1 ಗಂಟೆಯಿಂದಲೂ ಎಡಬಿಡದೆ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನು 2 ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಮೆಜಿಸ್ಟಿಕ್ , ಶಿವಾನಂದ ಸರ್ಕಲ್ , ಶೇಷಾದ್ರಿಪುರಂ, ಮಲ್ಲೇಶ್ವರಂ , ಮೇಖ್ರಿ ಸರ್ಕಲ್, ಹೆಬ್ಬಾಳ, ಕೊಡಿಗೆಹಳ್ಳಿ ಗೇಟ್ , ಯಲಹಂಕ , ಕೆ.ಆರ್ ಸರ್ಕಲ್ , ಚಾಮರಾಜಪೇಟೆ, ಕೆ. ಆರ್ ಮಾರ್ಕೆಟ್, ರಾಜಾಜಿ ನಗರ, ವಿಜಯನಗರ, ಮಾಗಡಿರಸ್ತೆ, ಕಾಮಾಕ್ಷಿ ಪಾಳ್ಯ, ಬಸವನಗುಡಿ, ವಿಧಾನಸೌಧ, ಶಿವಾಜಿ ನಗರ, ಬಸವೇಶ್ವರ್ ನಗರ, ಕೆ.ಆರ್ ಸರ್ಕಲ್, ಕಾರ್ಪೋರೇಷನ್, ಕೆ.ಆರ್ ಮಾರ್ಕೆಟ್, ಎಚ್ ಎಸ್ ಆರ್ ಲೇಔಟ್, ಹೊಸೂರು ರಸ್ತೆ, ಬೊಮ್ಮನಹಳ್ಳಿ ಸೇರಿದಂತೆ ಹಲವಡೆ ಮಳೆಯಾಗಿದೆ.

 

Edited By

Shruthi G

Reported By

Sudha Ujja

Comments