ನಟನಿಗೆ ಕಪಾಳಮೋಕ್ಷ ಮಾಡಿದ ಬಾಹುಬಲಿ ನಟಿ

02 Aug 2017 11:55 AM | Entertainment
403 Report

ಬಾಹುಬಲಿ ಚಿತ್ರದಲ್ಲಿ ನಟಿಸಿದ್ದ ಸ್ಕಾರ್ಲೆಟ್ ವಿಲ್ಸನ್ ಎಂಬ ನಟಿಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಬಾಹುಬಲಿ ಚಿತ್ರದಲ್ಲಿ ಮನೋಹರಿ 
ಐಟಂ ಸಾಂಗ್`ನಲ್ಲಿ ಕಾಣಿಸಿಕೊಂಡಿದ್ದ ಸ್ಕಾರ್ಲೆಟ್ ವಿಲ್ಸನ್, ಸದ್ಯ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಅನುಚಿತ ವರ್ತನೆ ತೋರಿದವನಿಗೆ ಬಿಸಿ ಮುಟ್ಟಿಸಿರುವ 
ಘಟನೆ ವರದಿಯಾಗಿದೆ. ನಟಿ ಸ್ಕಾರ್ಲೆಟ್ ಹನ್ಸಾ ಏಕ್ ಸನ್ಯೋಗ್ ಚಿತ್ರದ ಐಟಂ ಸಾಂಗ್`ನಲ್ಲಿ ನಟಿಸುತ್ತಿದ್ದು, ಸೆಟ್`ನಲ್ಲಿದ್ದ ಉಮಾಕಾಂತ್ ಎಂಬಾತ 
ಸನ್ನೆ ಮಾಡಿದ್ದನಂತೆ. ಜೊತೆಗೆ ಕೂದಲು ಮುಟ್ಟಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ತಾಳ್ಮೆ ಕಳೆದುಕೊಂಡ ನಟಿ ಕಪಾಳಕ್ಕೆ ಹೊಡೆದು ಶೂಟಿಂಗ್ 
ಸೆಟ್`ನಿಂದಲೇ ಹೊರಹೋಗಿದ್ದಾರೆ ಎಂದು ವರದಿಯಾಗಿದೆ.ಚಿತ್ರತಂಡದ ಸದಸ್ಯರು ಘಟನೆಯನ್ನ ಖಚಿತಪಡಿಸಿದ್ದಾರೆ. ನಿರ್ಮಾಪಕರು ಸಹ ಫಿಲ್ಮ್ 
ಫೆಡರೇಶನ್`ಗೆ ಈ ಬಗ್ಗೆ ದೂರು ನೀಡಲು ನಿರ್ಧರಿಸಿದ್ದು, ಒಂದೊಮ್ಮೆ ರಾಯ್ ಕ್ಷಮೆ ಕೇಳದಿದ್ದರೆ ನಟನಾ ಪರವಾನಗಿ ರದ್ದಾಗುವ ಸಾಧ್ಯತೆ ಇದೆ.
 

Edited By

Suhas Test

Reported By

Sudha Ujja

Comments