ದರ್ಶನ್ - ಪ್ರೇಮ್ ಕಾಂಬಿನೇಶನ್ ನಲ್ಲಿ ಬರಲಿದೆ 'ಆಂಜನೇಯ' ಸಿನಿಮಾ

29 Jul 2017 4:31 PM | Entertainment
572 Report

ನಟ ದರ್ಶನ್ ಮತ್ತು ಪ್ರೇಮ್ ಮತ್ತೆ ಒಟ್ಟಿಗೆ ಸಿನಿಮಾ ಮಾಡುವ ಸುದ್ದಿ ಅನೇಕ ದಿನಗಳಿಂದ ಕೇಳಿ ಬರುತಿತ್ತು. ಇದೀಗ ಆ ಸಿನಿಮಾಗೆ 'ಆಂಜನೇಯ' ಎನ್ನುವ ಟೈಟಲ್ ಫಿಕ್ಸ್ ಆಗಿದೆಯಂತೆ. ಇದು ಪಕ್ಕಾ ಮಾಸ್ ಸಿನಿಮಾ ಇದಾಗಿದ್ದು, ಪವರ್ ಫುಲ್ ಟೈಟಲ್ ಬೇಕು ಅಂತ 'ಆಂಜನೇಯ' ಎಂದು ಹೆಸರಿಟ್ಟಿದೆಯಂತೆ ಚಿತ್ರತಂಡ.

ಈ ಹಿಂದೆ 'ಕರಿಯ' ಸಿನಿಮಾವನ್ನು ಮಾಡಿದ್ದ ದರ್ಶನ್ ಮತ್ತು ಪ್ರೇಮ್ ಜೋಡಿ ಈಗ 'ಆಂಜನೇಯ' ಚಿತ್ರದ ಮೂಲಕ 14 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದೆ.

'ಹೆಬ್ಬುಲಿ' ಸಿನಿಮಾದ ನಿರ್ಮಾಪಕ ಉಮಾಪತಿ ಈ ಸಿನಿಮಾವನ್ನು ನಿರ್ಮಾಣ ಮಾಡಿಲಿದ್ದಾರೆ. ಸದ್ಯ 'ದಿ ವಿಲನ್' ಸಿನಿಮಾದಲ್ಲಿ ಪ್ರೇಮ್ ಬ್ಯುಸಿ ಇದ್ದರೆ, ಇತ್ತ ದರ್ಶನ್ ತಮ್ಮ 'ಕುರುಕ್ಷೇತ್ರ' ಸಿನಿಮಾದ ತಯಾರಿಯಲ್ಲಿದ್ದಾರೆ. ಈ ಎರಡು ಸಿನಿಮಾ ಮುಗಿದ ಮೇಲೆ ದರ್ಶನ್ ಮತ್ತು ಪ್ರೇಮ್ ಕಾಂಬಿನೇಶನ್ ನ 'ಆಂಜನೇಯ' ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

Edited By

Shruthi G

Reported By

Shruthi G

Comments