ಹೆಣ್ಣು ಮಗುವಿಗೆ ಜನ್ಮ ನೀಡಿದ ಶ್ವೇತಾ

22 Jul 2017 11:17 AM | Entertainment
436 Report

ಬೆಂಗಳೂರು:ಸ್ಯಾಂಡಲ್ ವುಡ್ ನ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ಕುಟುಂಬಕ್ಕೆ ಹೊಸ ಸದಸ್ಯೆಯೊಬ್ಬರ ಆಗಮನವಾಗಿದ್ದು, ಶ್ವೇತಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸ್ವತ: ಶ್ವೇತಾ ಈ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಆಶೀರ್ವಾದಕ್ಕೆ ಧನ್ಯವಾದಗಳು ಎಂದಿದ್ದಾರೆ.

ತಾಯಿ -ಮಗು ಆರೋಗ್ಯವಾಗಿರುವುದಾಗಿ ಅವರ ಪತಿ ಅಮಿತ್ ಶ್ರೀವಾಸ್ತವ್ ತಿಳಿಸಿದ್ದಾರೆ. ಶ್ವೇತಾ ತುಂಬು ಗರ್ಭಿಣಿಯಾಗಿದ್ದ ವೇಳೆ ತಾಯ್ತನದ ಸಡಗರವನ್ನು ಸಂಭ್ರಮದಿಂದ ಅನುಭವಿಸಲು, ಹಾಗೂ ಒಂಭತ್ತು ತಿಂಗಳ ಅನುಭವವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡು ಗಮನ ಸೆಳೆದಿದ್ದರು.

Edited By

venki swamy

Reported By

Sudha Ujja

Comments